ಚಿರಂಜೀವಿ ಸರ್ಜಾ ಬಗ್ಗೆ ಪತ್ನಿ ಮೇಘನಾ ರಾಜ್ ಮಾಡಿರುವ ಟ್ವೀಟ್ ಏನು ಗೊತ್ತಾ?

MY CHIRU FOREVERRed heart

ಚಿರು , ಬಾರಿ ಬಾರಿ ಎಷ್ಟು ಬಾರಿ ಪ್ರಯತ್ನಿಸಿದರು ನನ್ನ ಮನದಾಳದ ಮಾತನ್ನು ಪದಗಳಲ್ಲಿ ವರ್ಣಿಸಲಾಗದ ಪರಿಸ್ಥಿ ನನ್ನದು . ನಿನ್ನ ಮೇಲಿನ ಪ್ರೀತಿ , ಹುಚ್ಚು ವಿಶ್ವಾಸದ ಬಗ್ಗೆ ಮಾತಾಡಲು ಶಬ್ದಕೋಶದಲ್ಲಿ ಪದಗಳೇ ಸಾಲುತ್ತಿಲ್ಲ . ನನ್ನ ಸ್ನೇಹಿತ , ನನ್ನ ಪ್ರೇಮಿ , ನನ್ನ ಹಿತೈಷಿ , ನನ್ನ ಮಗು , ನನ್ನ ಸರ್ವಸ್ವ , ನನ್ನ ಪತಿ- ನೀನು ಇದೆಲ್ಲದ್ದಕ್ಕಿಂತ ಹೆಚ್ಚು , ನೀನು ನನ್ನ ಆತ್ಮದ ಅರ್ಧ ಭಾಗ , ಚಿರು , ಪ್ರತಿದಿನ ನಮ್ಮ ಮನೆಯ ಬಾಗಿಲು ನೋಡುತ್ತಾ … ಅಗೋ ನೀ ಬಂದೇಬಿಟ್ಟಿ , ” ನಾ ಮನೆಗೆ ಬಂದೆ ” ಅಂತ ಹೇಳುತ್ತ ನೀನು ಬಂದೇಬಿಡುವೆ ಎಂಬ ಒಂದು ಆಸೆ . ನೀನು ಬರದಿದ್ದಾಗ ನನ್ನ ಆಥವನ್ನೆ ಸುಡುವಂತ ಒಂದು ನೋವು ನನ್ನಲ್ಲಿ , ಪ್ರತಿದಿನದ ಪ್ರತಿಕ್ಷಣ ನಿನ್ನನ್ನು ಸ್ಪರ್ಶಿಸಲಾಗದೆ ನನ್ನ ಕಾಲೆಳಗಿನ ಭೂಮಿ ಕುಸಿಯುವಂತೆ ಒಂದು ನಡುಕ , ಸಾವಿರ ಬಾರಿ ನಿಧಾನವಾಗಿ ನೋವಿನಿಂದ ಸಾಯುವಂತೆ . ಆದರೆ ಪ್ರತಿ ಬಾರಿ ನಾನು ನೋವುಂಡಾಗ , ಪ್ರತಿಬಾರಿ ನಾನು ಕಣ್ಣೀರು ಹಾಕಿದಾಗ , ದೈವತೀತ ಅದ್ಭುತದಂತೆ ನೀನು ಇಲ್ಲೇ ನನ್ನ ಸುತ್ತ ನಿನ್ನ ಪ್ರೀತಿಯ ರಕ್ಷಾಕವಚದಲ್ಲಿ ಆರೈಕೆ ಮಾಡುತ್ತಿರುವ ಭಾವನೆ ನನಗೆ . ಸದಾಕಾಲ ನನ್ನ ರಕ್ಷಿಸುತ್ತಿರುವ ಕಾವಲುದೈವ .

 

ಎಷ್ಟು ಅಪಾರ ನಿನ್ನ ಪ್ರೀತಿ . ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಲು ಮನಸಾಗಲ್ಲಿಲ್ಲ ನಿನಗೆ ಹೋಗುತ್ತಾ , ನಮ್ಮ ಪ್ರೀತಿಯ ಸಂಕೇತವಾಗಿ ಒಂದು ಪುಟ್ಟ ಹರುಷವನ್ನ ನನಗೆ ಕೊಟ್ಟು ಹೋಗಿದ್ದಿಯ . ಈ ಕಾಣಿಕೆಗೆ ನಾನು ಚಿರಋಣಿ . ನಮ್ಮ ಈ ಪುಟ್ಟ ಹರುಷವನ್ನು ಭೂಮಿಗೆ ತರಲು ಕಾತುರ ನನಗೆ . ಮಗುವಾಗಿನಿನ್ನ ಮತ್ತೆ ಮುದ್ದಿಸುವಕಾತುರ , ನಿನ್ನ ಚಿರುನಗೆಯ ನೋಡುವ ಕಾತುರ , ನೀನಿದ್ದಲ್ಲೇಲ್ಲ ಬೆಳಕು ಚೆಲ್ಲುತ್ತಿದ್ದ , ಎಲ್ಲರನ್ನೂ ಹರ್ಷಿಸುತ್ತಿದ್ದ ಆ ನಗು ಮತ್ತೊಮೆ ಕೇಳೋ ಕಾತುರೆ . ನೀನು ಮತ್ತೆ ಬರುವ ವೇಳೆಗಾಗೇ ನಾನು ಕಾಯುವೆ . ನೀನು ನನಗಾಗಿ ಕಾಯಿ ದಿಗಂತದ ಆ ಬದಿಯಲಿ , ನನ್ನ ಕೊನೆಯ ಉಸಿರು ಇರುವವರೆಗೂ ನೀನು ಚಿರಂಜೀವಿ . ನೀನು ನನ್ನಲೇ ಇರುವೆ .

 

Please follow and like us:
error