ಚಿಕ್ಕಬಳ್ಳಾಪುರದ ಗೌರಿ ಬಿದನೂರಿನ ನಿನ್ನೆ ಮೃತಪಟ್ಟ ವೃದ್ದೆಗೆ ಕೊರೊನಾ ಪಾಸಿಟಿವ್

Bellary :   ಚಿಕ್ಕಬಳ್ಳಾಪುರದ ಗೌರಿಬಿದನೂರಿನ ನಿನ್ನೆ ಮೃತಪಟ್ಟ 84 ವರ್ಷದ ವೃದ್ದೆಗೆ ಕೊರೋನಾ ಪಾಸಿಟಿವ್ ಇತ್ತು ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಸ್ಪಷ್ಟಪಡಿಸಿದ್ದರೆ. ನಿನ್ನೆ ಮೃತಪಟ್ಟವರ ವರದಿ ಇಂದು ಬಂದಿದ್ದು, ಕೊರೋನಾ ಪಾಸಿಟಿವ್ ಇದೆ. ಅವರ ಮನೆಯ ಸುತ್ತಮುತ್ತಲೂ 5 ಕಿ.ಮೀ, ಕ್ವಾರೆಂಟೇನ್ ಮಾಡಲಾಗಿದೆ ಎಂದು ಹೇಳಿದ್ದು, ಈ ಮೂಲಕ ರಾಜ್ಯದಲ್ಲಿ ಎರಡನೇ ಬಲಿ ಕೊರೋನಾ ಮಹಾಮಾರಿಗೆ ಆಗಿದೆ.   ಇದುವರೆಗೆ, 1,30 ಲಕ್ಷ ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 214 ಜನರನ್ನು ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಮಾಡಲಾಗುತ್ತಿದೆ. 2242  ಜನರಿಗೆ ನೆಗೆಟಿವ್ ಇದೆ,  ಇದುವರೆಗೆ 52 ಪಾಸಿಟಿವ್ ಕೇಸ್ ಇದೆ.  ಗೌರಿಬಿದನೂರಿನ ಡೆತ್ ಕೇಸ್ ಪಾಸಿಟಿವ್ ಇದೆ ಅಂತ ಲ್ಯಾಬ್ ರಿಪೋರ್ಟ್ ಬಂದಿದೆ. 50 ಪಾಸಿಟಿವ್ ಕೇಸ್, ಎರಡು ಡೆತ್ ಆಗಿದೆ. ನಾನು ಬಳ್ಳಾರಿ ಜಿಲ್ಲೆಯಿಂದ ಪ್ರಾರಂಭ ಮಾಡಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ಮಾಡುತ್ತೇನೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇನೆ.  ಬೇಕಾದ ಎಲ್ಲಾ ಸೌಲಭ್ಯ ಮಾಡಿಕೊಡಲು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ.  ಎಲ್ಲಾ ರೀತಿಯ ಪ್ರಿಕಾಷನರಿ ತೆಗೆದುಕೊಳ್ಳಲಾಗುತ್ತಿದೆ.  ಕೇಂದ್ರ ಸರಕಾರದ ನಿಯಮಗಳನ್ನು ಪಾಲನೆ ಮಾಡಬೇಕು. ಸಿಎಂ ಯಡಿಯೂರಪ್ಪ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.  ಅವರು ನಮ್ಮ ಜತೆಗಿದ್ದಾರೆ, ಪ್ರಧಾನಿ ಅವರ ಹೇಳಿಕೆ ಪಾಲಿಸಿ, ಜನರು ಸಂಕಷ್ಟದಲ್ಲಿದ್ದಾರೆ. ನಾವು ಕೆಲಸ ಮಾಡುತ್ತೇವೆ,  ಜನರು ಆತಂಕ ಪಡೋದು ಬೇಡ, ಆದರೆ ಮುಂಜಾಗ್ರತೆ ಬೇಕು.ನನ್ನ ಮನವಿ ಇಷ್ಟೆ ಬಹಳ ಜನರು ಬೀದಿಗೆ ಬರ್ತಿದ್ದಾರೆ. ಮೊದಲು ಪ್ರಾಣ ಉಳಿಯಬೇಕು ಜೀವ ಉಳಿಸಿಕೊಳ್ಳಿ ಎಂದು ಶ್ರೀ ರಾಮುಲು ಮನವಿ ಮಾಡಿದರು.  ಪೊಲೀಸರು ತಮ್ಮ  ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲು ಸೂಚಿಸುವೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.

Please follow and like us:
error