ಚಲನಚಿತ್ರ ನಿರ್ದೇಶನ, ಛಾಯಾಗ್ರಹಣ, ವಿಡಿಯೋ ಸಂಕಲನ, ಸ್ಕ್ರಿಪ್ಟ್ ತಯಾರಿಕೆ, ಅಭಿನಯ ವಸತಿ ಸಹಿತ ಉಚಿತ ತರಬೇತಿ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ, 30 ವರ್ಷ ವಯೋಮಿತಿಯೊಳಗಿನ ಯುವಕ/ ಯುವತಿಯವರಿಗೆ ಚಲನಚಿತ್ರ ನಿರ್ದೇಶನ, ಛಾಯಾಗ್ರಹಣ, ವಿಡಿಯೋ ಸಂಕಲನ, ಸ್ಕ್ರಿಪ್ಟ್ ತಯಾರಿಕೆ, ಅಭಿನಯ ಇತ್ಯಾದಿಗಳ ಕುರಿತು ವಸತಿ ಸಹಿತ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನ.

ಕರ್ನಾಟಕ ಚಲನಚಿತ್ರ ಅಕಾಡೆಮಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 30 ವರ್ಷ ವಯೋಮಿತಿಯೊಳಗಿನ ಯುವತಿ/ಯುವಕರಿಗೆ ಚಲನಚಿತ್ರ ನಿರ್ದೇಶನ, ಛಾಯಾಗ್ರಹಣ, ವಿಡಿಯೋ ಸಂಕಲನ, ಸ್ಕ್ರಿಪ್ಟ್ ತಯಾರಿಕೆ, ಅಭಿನಯ ಇತ್ಯಾದಿಗಳ ಕುರಿತು ವಸತಿ ಸಹಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಚಲನಚಿತ್ರ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವ 30 ವರ್ಷ ವಯೋಮಿತಿಯೊಳಗಿನ ಯಾವುದೇ ಪದವೀಧರ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಯುವಕ/ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ವೆಬ್ ಸೈಟ್ www.kcainfo.in ಇಲ್ಲಿ ಡೌನ್ ಲೋಡ್ ಮಾಡಬಹುದು ಅಥವಾ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಚೇರಿಯಿಂದ ಖುದ್ದು ಪಡೆಯಬಹುದಾಗಿದೆ.

ಪದವಿಯಲ್ಲಿ ಪಡೆದಿರುವ ಸರಾಸರಿ ಅಂಕದ ಜೇಷ್ಠತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 20.01.2021 ರಂದು ಸಂಜೆ 5.00 ಘಂಟೆಯೊಳಗೆ ಅರ್ಜಿಯಲ್ಲಿ ತಿಳಿಸಿರುವ ದಾಖಲಾತಿಗಳೊಂದಿಗೆ ರಿಜಿಸ್ಟಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ, #20/ಎ, ನಂದಿನಿ ಲೇಔಟ್, ಪ್ರೆಸಿಡೆನ್ಸಿ ಶಾಲೆ ಪಕ್ಕ, ಬೆಂಗಳೂರು-560096. ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುವ 20.01.2021 ಕ್ಕೆ 30 ವರ್ಷ ವಯಸ್ಸಿನ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆ ದಿನಾಂಕದ ನಂತರ ಸ್ವೀಕರಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ 080-23493410 ಕ್ಕೆ ಕಚೇರಿ ಅವಧಿಯಲ್ಲಿ ಸಂಪರ್ಕಿಸಲು ಅಕಾಡೆಮಿ ಪ್ರಕಟಣೆ ತಿಳಿಸಿದೆ.

Please follow and like us:
error