ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆ ಮಾಡಿದ್ದು ಚೆನ್ನೈ ಇಂಜಿನಿಯರ್

ಹೊಸದಿಲ್ಲಿ, ಡಿ.3: ಸೆಪ್ಟಂಬರ್‌ನಲ್ಲಿ ಚಂದ್ರನ ಮೇಲ್ಮೈನಲ್ಲಿ ಇಳಿಯುವ ಪ್ರಯತ್ನದಲ್ಲಿ ಧ್ವಂಸವಾದ ವಿಕ್ರಮ್ ಲ್ಯಾಂಡರ್‌ನ ಅವಶೇಷವನ್ನು ಪತ್ತೆ ಹೆಚ್ಚಿದ ಎಲ್ಲ ಶ್ರೇಯಸ್ಸು ಚೆನ್ನೈ ಮೂಲದ ಇಂಜಿನಿಯರ್ ಷಣ್ಮುಗ ಸುಬ್ರಮಣಿಯನ್‌ಗೆ ಸಲ್ಲಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ಚಂದ್ರಯಾನ-2ರ ಲ್ಯಾಂಡರ್‌ನಲ್ಲಿ ಅವಶೇಷ ಪತ್ತೆಯಾಗಿರುವ ಕುರಿತಂತೆ ಷಣ್ಮುಗ ಅವರು ನಮಗೆ(ನಾಸಾ)ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ)ಗೆ ಮಾಹಿತಿ ನೀಡಿದ್ದರು ಎಂದು ನಾಸಾ ತಿಳಿಸಿದೆ.

ನಾಸಾ ವಿಜ್ಞಾನಿಗಳಿಂದ ನನಗೆ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು ಎಂದ ಚೆನ್ನೈನ ಎಂಜಿನಿಯರ್ 33ರ ಹರೆಯದ ಷಣ್ಮುಗ, ನಾನು ನಾಸಾ ಹಾಗೂ ಇಸ್ರೋಗೆ ಟ್ವೀಟ್ ಮಾಡಿದ್ದೆ. ನಾಸಾದ ಹಲವು ವಿಜ್ಞಾನಿಗಳಿಗೆ ಇ-ಮೇಲ್‌ಗಳನ್ನು ಕಳುಹಿಸಿದ್ದೆ. ಇವರೆಲ್ಲರೂ ಲೂನಾರ್ ರೆಕೊನಸೆನ್ಸ್ ಆರ್ಬಿಟರ್(ಎಲ್‌ಆರ್‌ಒ)ಚಿತ್ರಗಳ ಮೇಲ್ವಿಚಾರಣೆಯನ್ನು ವಹಿಸಿದ್ದರು. ಎರಡೂ ಸಂಸ್ಥೆಗಳಿಂದ ನನಗೆ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು ಎಂದು ಹೇಳಿದ್ದಾರೆ.

Please follow and like us:
error