ಗ್ರಾಹಕರ ರಕ್ಷಣಾ ಕಾಯ್ದೆಯ ವೈಶಿಷ್ಟö್ಯವನ್ನು ಅರಿತುಕೊಳ್ಳಿ: ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ,  : ಸಾರ್ವಜನಿಕರು ಗ್ರಾಹಕರ ರಕ್ಷಣಾ ಕಾಯ್ದೆ- 2019 ರ ವೈಶಿಷ್ಟö್ಯಗಳನ್ನು ತಿಳಿದುಕೊಂಡು ವ್ಯಾಪಾರ, ವಹಿವಾಟನ್ನು ಮಾಡುವಾಗ ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವೇದಿಕೆ ಮತ್ತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತç ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ(ಮಾ.17) ದಂದು ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ-2021 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗಡಿ, ಮಾರುಕಟ್ಟೆ, ವ್ಯಾಪಾರ, ಆಡಳಿತ ಸೇವೆ ಸೇರಿದಂತೆ ಎಲ್ಲಾ ಸೇವೆಗಳನ್ನು ಪಡೆಯುವಾಗ ಕಾನೂನಾತ್ಮಕ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಯಾವುದೇ ಸೇವೆಗಳಲ್ಲಿ ಗ್ರಾಹಕರಿಗೆ ಅನುಮಾನವಿದ್ದಲ್ಲಿ, ನಷ್ಟವಾದಲ್ಲಿ ಆ ಸೇವೆಗಳ ವಿರುದ್ಧ ದೂರು ದಾಖಲಿಸಬಹುದು. ಇದರಿಂದ ಗ್ರಾಹಕರಿಗೆ ನ್ಯಾಯ ಸಿಗುತ್ತದೆ. ನೇರ ಮತ್ತು ಆನ್‌ಲೈನ್ ವ್ಯಾಪಾರಗಳಲ್ಲಿ ಕೂಡ ಎಚ್ಚರ ಮತ್ತು ಜಾಗೃತಿಯನ್ನು ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಗ್ರಾಹಕರ ಹಿತರಕ್ಷಣೆಗೆ ಹಲವು ಸೇವೆಗಳನ್ನು ಒದಗಿಸಲಾಗುತ್ತದೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಷ್ಟೇ ಅಲ್ಲದೇ ವ್ಯಾಪಕವಾಗಿ ಸಿಗುವ ಸೇವೆಗಳನ್ನು ಬಗ್ಗೆ ಕೂಲಂಕಷವಾಗಿ ವಿಚಾರಿಸಿ ಪಡೆಯಬೇಕು. ಇಲ್ಲದಿದ್ದರೆ ಮೋಸ ಹೋಗುವ ಸಂಭವಗಳು ಎದುರಾಗುತ್ತವೆ. ಈ ವಿಷಯವಾಗಿ ಗ್ರಾಹಕರು ಎಚ್ಚೆತ್ತುಕೊಂಡಿರಬೇಕು ಹೊರತು ನಿರ್ಲಕ್ಷಿಸಬಾರದು. ಒಂದುವೇಳೆ ಗ್ರಾಹಕರು ಮೋಸ ಹೋದಾಗ ಗ್ರಾಹಕರಿಗಾಗಿಯೇ ಇರುವ ಆಯೋಗದ ಗಮನಕ್ಕೆ ತಂದು ದೂರನ್ನು ಸಲ್ಲಿಸಿ, ನ್ಯಾಯ ಪಡೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಜಿ ಮಾಲ್ದರ್ ಮಾತನಾಡಿ, ಗ್ರಾಹಕರು ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಬೇಕಾದರೆ ತಮಗಿರುವ ಹಕ್ಕುಗಳ ಬಗ್ಗೆ ಅರಿವಿರಬೇಕು. ದಿನಬಳಕೆ ವಸ್ತುಗಳು, ಉಡುಪುಗಳನ್ನು ಕೊಂಡುಕೊಳ್ಳುವಾಗ ಆ ವಸ್ತುವಿನ ಗುಣಮಟ್ಟ, ಬೆಲೆ, ಬಳಕೆಗೆ ಯೋಗ್ಯ ಅವಧಿಯನ್ನು ಪರಿಶೀಲಿಸಬೇಕು. ಬಳಿಕ ನಿಮಗೆ ತೃಪ್ತಿಕರ ಅನಿಸಿದರೆ ಮಾತ್ರ ಖರೀದಿಸಬೇಕು. ಕೊನೆಯಲ್ಲಿ ನೀವು ವಸ್ತು ಕೊಳ್ಳಲು ಪಾವತಿಸಿದ ಬೆಲೆಯ ರಶೀದಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಏಕೆಂದರೆ ವಸ್ತುಗಳನ್ನು ಬಳಸುವಾಗ ನಿಮಗೆ ಅವುಗಳಲ್ಲಿ ಈ ಎಲ್ಲಾ ಲಕ್ಷಣಗಳು ಕಂಡುಬಾರದೆ ಇದ್ದಲ್ಲಿ ನೀವು ವಸ್ತು ಖರೀದಿಸಿದ ಅಂಗಡಿ, ಮಾರುಕಟ್ಟೆ, ಕಂಪನಿ ವಿರುದ್ಧ ದಾವೆ ಹೂಡಿ ಪರಿಹಾರದ ರೂಪದಲ್ಲಿ ನ್ಯಾಯ ಪಡೆಯಬಹುದು ಎಂದರು.
ಸೌಂದರ್ಯ ವರ್ಧಕ ವಸ್ತುಗಳು ರಿಯಾಯಿತಿ ದರದಲ್ಲಿ ಮತ್ತು ಒಂದು ಕೊಂಡರೆ ಒಂದು ಉಚಿತವಿದ್ದಾಗ ಮಹಿಳೆಯರು ಅಂತಹ ವಸ್ತುಗಳನ್ನು ಖರೀದಿಸಲು ಮುಗಿಬೀಳುವ ಬದಲು ಆ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಬೇಕು. ಅದೇ ರೀತಿಯಾಗಿ ರೈತರು ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದಾಗ ಸೂಕ್ತವಾಗಿ ಅದರ ಫಲಿತಾಂಶ ಬರದಿದ್ದರೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದು ಬೀಜಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಇದಕ್ಕಾಗಿ ಮುನ್ನೆಚ್ಚರಿಕೆಯಾಗಿ ಬಿತ್ತನೆ ಸಮಯದಲ್ಲಿ ಸ್ವಲ್ಪ ಪ್ರಮಾಣದ ಬೀಜಗಳನ್ನು ತೆಗೆದಿಡಬೇಕು. ಪ್ರಯೋಗಾಲಯದಲ್ಲಿ ಬೀಜಗಳಲ್ಲಿ ಏನಾದರೂ ಲೋಪ ಕಂಡುಬAದಲ್ಲಿ ಬೀಜ ಖರೀದಿಸಿದ ಕಂಪನಿ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬಹುದು. ಹಾಗೂ ಯಾವುದೇ ವ್ಯಕ್ತಿ ತನ್ನ ವಾಹನಗಳನ್ನು ಚಾಲನಾ ಪರವಾನಗಿ, ವಯಸ್ಸಿನ ಅರ್ಹತೆ ಇಲ್ಲದವರಿಗೆ ನೀಡಬಾರದು. ಅಪಘಾತ ಅಥವಾ ಯಾವುದೇ ಅವಘಡ ಸಂಭವಿಸಿದಲ್ಲಿ ಸಮಸ್ಯೆ ಎದುರಾಗುತ್ತದೆ ಮತ್ತು ಗ್ರಾಹಕರ ರಕ್ಷಣೆಗೆ ವಿಮೆಯನ್ನು ಪಡೆದಿರಬೇಕು ಎಂದು ವಿವರಿಸಿದರು.
ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟಾçರ್ ಮತ್ತು ಆಡಳಿತಾಧಿಕಾರಿ ಪಿ.ಎಸ್ ಅಮರದೀಪ್ ಅವರು ಮಾತನಾಡಿ, ಪ್ರತಿ ವರ್ಷ ಗ್ರಾಹಕರ ರಕ್ಷಣೆಯ ಮಹತ್ವ ಸಾರುವ ನಿಟ್ಟಿನಲ್ಲಿ ಜಾಗತಿಕವಾಗಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಹಕರು ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಗ್ರಾಹಕರ ಹಕ್ಕುಗಳನ್ನು ಮತ್ತು ಅದರ ಅಗತ್ಯತೆ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಗ್ರಾಹಕರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಹಣ ಕೊಟ್ಟು ವಸ್ತು ಮತ್ತು ಸೇವೆಗಳನ್ನು ಪಡೆದುಕೊಳ್ಳುವವರೆಲ್ಲರೂ ಗ್ರಾಹಕರೇ. ಆದರೆ ಹೆಚ್ಚಿನ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಅರಿವೇ ಇಲ್ಲ. ಹಾಗಾಗಿ ಗ್ರಾಹಕರು ಹಕ್ಕು ಮತ್ತು ಬಾಧ್ಯತೆಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.
ನ್ಯಾಯವಾದಿ ಸಾವಿತ್ರಿ ಮುಜಮದಾರ ‘ಗ್ರಾಹಕರ ರಕ್ಷಣಾ ಕಾಯ್ದೆ – 2019 ರ ಹೊಸ ವೈಶಿಷ್ಟö್ಯತೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಗಂಗಪ್ಪ ಎಂ. ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಟಿ. ಮಂಜುನಾಥ, ಜಿಲ್ಲಾ ಗ್ರಾಹಕ ಆಯೋಗದ ಸದಸ್ಯೆ ಸುಜಾತಾ ಅಕ್ಕಸಾಲಿ, ಕಾನೂನು ಮಾಪನ ಶಾಸ್ತç ಇಲಾಖೆಯ ನಿರೀಕ್ಷಕ ಬದಿಯುದ್ದೀನ್ ಅಹ್ಮದ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಹಕರು, ನ್ಯಾಯಬೆಲೆ ಅಂಗಡಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Please follow and like us:
error