ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ  ಚುನಾವಣೆ  ತಾತ್ಕಾಲಿಕವಾಗಿ ಮುಂದೂಡಲು ಚುನಾವಣಾ ಆಯೋಗ ತೀರ್ಮಾನ !

 

ಬೆಂಗಳೂರು :  ರಾಜ್ಯದಲ್ಲಿನ. 6025 ಗ್ರಾಮ ಪಂಚಾಯಿತಿಗಳಲ್ಲಿ ಜೂನ್‌-2020ರ ಮಾಹೆಯಿಂದ ಆಗಸ್ಟ್‌-2020ರ  ಮಾಹೆಯವರೆಗೆ ಸುಮಾರು 5800 ಗ್ರಾಮ ಪಂಚಾಯಿತಿಗಳೆ ಅವಧಿ ಮುಕ್ತಾಯವಾಗಲಿದೆ. ರಾಜ್ಯ ಚುನಾವಣಾ ಆಯೋಗವು ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಮತದಾರರ ಪಟ್ಟಿಯನ್ನು ತಯಾರಿಸಲು

ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿತ್ತು. ಈ ಹಂತದಲ್ಲಿ ಜೀಶದಾದ್ಕಂಶ ಕೋವಿಡ್‌-19 ನಿಯಂತ್ರಣಕ್ಕಾಗಿ ಕೇಂದ್ರಸರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಮಾಡಿದ್ದರಿಂದ, ಮತದಾರರ ಪಟ್ಟಿಯ ಶಯಾರಿಕೆ ಪ್ರಕ್ರಿಯೆಯನ್ನು ಹಾಗೂ ಇತರೆ ಚುನಾವಣಾ ಸಿದ್ದತೆಗಳನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ, ಸರ್ಕಾರವು ಇತ್ತೀಚೆಗೆ ದಿನಾ೦ಕ:31.03.2029ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಜಾಯತ್‌ ರಾಜ್‌ ಅಧಿನಿಯಮ, 1993ರ ಪ್ರಕರಣ 5ಕ್ಕೆ ತಿದ್ದುಪಡಿ ಮಾಡಿ ಮೀಸಲಾತಿಯನ್ನು ಹತ್ಪುವರ್ಷದ ಬದಲಿಗೆ ಐದು ವರ್ಷಗಳು ಎಂದು ಪ್ರತಿನಿಯೋಜಿಸಿ ತಿದ್ದುಪಡಿ ಮಾಡಿರುವುದರಿಂದ, ಈಗ ಹೊಸದಾಗಿ ಕರ್ನಾಟಕ ಪಂಚಾಯತ್‌ ರಾಜ್‌ «ಗ್ರಾಮ ಪಂಚಾಯಿತಿಗಳಲ್ಲಿನ ಸ್ಥಾನಗಳನ್ನು ಆವರ್ಶನೆಯ ಮೇಲೆ ಮೀಸಲಿಡುವ) ನಿಯಮಗಳು, 1998 ರಂತೆ` ಕ್ಷೇತ್ರಗಳ ಮೀಸಲು ಸ್ಥಾನಗಳನ್ನು ಅವರ್ಶನೆಯ ಮೇಲೆ ಹಂಚಿಕೆ ಮಾಡಿ ನಿಗದಿಪಡಿಸಬೇಕಾಗಿರುತ್ತದೆ.

ಭಾರತ ಸಂವಿಧಾನದ ಪರಿಚ್ಛೇದ 243-ಇ ರಲ್ಲಿ ಪಂಜಾಯಿತಿಗಳ ಅವಧಿಯು ಮುಕ್ತಾಯಗೊಳ್ಳುವುದಕ್ಕೆ ಮುಂಚಿತವಾಗಿ ಹೊಸದಾಗಿ ಪಂಚಾಯಿತಿಯನ್ನು ರಜಿಸಲು ಚುನಾವಣೆ ನಡೆಸಬೇಕಾಗಿರತ್ತದೆ. ಕರ್ನಾಟಕ ಗ್ರಾಮ. ಸ್ಚರಾಜ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ, 1993ರ ಪ್ರಕರಣ 308ಎಎ ರಂತೆಯೂ ರಾಜ್ಯ ಚುನಾವಣಾ ಆಯೋಗವು ಪಂಜಾಯಿತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ಆದರೆ, ಕೋವಿಡ್‌-19 ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಿನಾಂಕ: 24.03.2020ರ ಆದೇಶದಲ್ಲಿ ಕೋವಿಡ್‌-19 ನಿಯಂತ್ರಣಕ್ಕಾಗಿ ದೇಶದಾದ್ಯಂತ ಸಮಾಜಿಕ ಅ೦ತರ (5008| ೮88೧0108) ಕಾಯ್ದುಕೊಳ್ಳುವ ಬಗ್ಗೆ ಆದೇಶಿಸಿದ್ದು, ಸದರಿ ಆದೇಶದಂತೆ, ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ. 10(2)(0ರ ಅಡಿಯಲ್ಲಿ ಕೋವಿಡ್‌-19ರ ಹರಡುವಿಕೆಯ ನಿಯಂತ್ರಣದ ಬಗ್ಗೆ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡುವ ಮತ್ತು ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ದೃಷ್ಟಿಯಿಂದ, ಸಾಮಾನ್ಯ ಜನರ ಚಲನವಲನಗಳನ್ನು ನಿಯಂತ್ರಿಸುವ ಬಗ್ಗೆ ಮಾರ್ಗಸೂಜಿಗಳನ್ನು ನೀಡಿದ್ದು, ಅದರಂತೆ ದೇಶದಾದ್ಯಂತ ಕ್ರಮವಹಿಸಲು ಸೂಚನೆಗಳನ್ನು ನೀಡಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು. ಕೋವಿಡ್‌-19 ಸೋಂಕು ಹರಡುವಿಕೆಯ ನಿಯಂತ್ರಣ ಸಾಧಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದ, ಲಾಕ್‌ಡೌನ್‌ ಕುರಿತ ಮಾರ್ಗಸೂಚಿಗಳನ್ನು ಕರ್ನಾಟಕದ ಎಲ್ಲಾ ಇಲಾಖೆಗಳಿಗೆ, ಜಿಲ್ಲಾಧಿಕಾರಿಗಳಿಗೆ. ಪೋಲೀಸ್‌ ರಿಷ್ಠಾಧಿಕಾರಿಗಳಿಗೆ ಮತ್ತಿತರೆ ಎಲ್ಲಾ ಇಲಾಖಾ ಮುಖ್ಯಸ್ಥರುಗಳಿಗೆ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲು ಆದೇಶಿಸಲಾಗುತ್ತಿದೆ.

ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ವಾಸ್ತವ ಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿಗಳನ್ನು ಪರಿಶೀಲಿಸಲಾಗಿ ಕೋವಿಡ್‌-19 ನಿಯಂತ್ರಣ ಕಾರ್ಯದಲ್ಲಿ ಸಂಪೂರ್ಣ ಜಿಲ್ಲಾಡಳಿತವು ತೊಡಗಿರುವುದರಿಂದ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿಗಳ, ಕೊರತೆ, ಸಾರಿಗೆ ವ್ಯವಸ್ಥೆ ಕೊರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೊಂದರೆಗಳುಂಟಾಗುವುದಾಗಿ ಕಂಡು ಬಂದಿರುತ್ತದೆ. ಚುನಾವಣೆಗೆ ಸಂಬಂದಿಸಿದಂತೆ, ಮತದಾರರ ಪಟ್ಟಿ ತಯಾರಿಕೆ, ಮತದಾನ್ಸ. ಮತ್ತು ಮತಗಳ ಎಣಿಕೆ ದಿನಾಂಕಗಳಂದು. ಜನಸಾಮಾನ್ಯರ, ಹಾಗೂ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು, ಸಿಬ್ಬಂದಿಗಳು; ಪೋಲಿಂಗ್‌ ಏಜಂಟರು, ರಾಜಕೀಯ ಪಕ್ಷಗಳು, ಸಹಾಯಕ ಸಿಬ್ಬಂದಿಗಳ ಓಡಾಟ ಮತ್ತು ಒಂದುಕಡೆ ಸೇರಬೇಕಾದ ಸಂದರ್ಭಗಳು ಅನಿವಾರ್ಯವಾಗಿ ಉಂಟಾಗುತ್ತದೆ. ಇದರಿಂದ ಜನಸಾಮಾನ್ಯರ ಆರೋಗ್ಯದ ರಕ್ಷಣೆಗೆ ಬಾದಕ ಉಂಟಾಗುತ್ತದೆ ಮತ್ತು ವೈರಸ್‌ ಹರಡುವಿಕೆಗೆ ಅವಕಾಶ ಉಂಟಾಗುತ್ತದೆ. ಮಾನ್ಯ ಸರ್ವೋಚ್ಛನ್ಶಾಯಾಲಯವು ಕಿಷನ್‌ಸಿಂಗ್‌ ತೋಮರ್‌ ವಿರುದ್ಧ ಸಿಟಿ ಮುನಿಸಿಪಲ್‌ ಕಾರ್ಪೋರೇಷನ್‌, ಅಹಮದಾಬಾದ್‌ ಮತ್ತು ಇತರರು, ಪ್ರಕರಣದಲ್ಲಿ ನೀಡಿರುವ ಆದೇಶದಲ್ಲಿ, ಮಾನವ ನಿರ್ಮಿತ ಅವಘಡಗಳಿಂದಾಗಿ ಕಾನೂನು ಸುವ್ಯವಸ್ಥೆ ಹಾಳಾದ ಪರಿಸ್ಥಿತಿಯಲ್ಲಿ, ಅಥವಾ ನೈಸರ್ಗಿಕ ವಿಪತ್ತು ಸಂದರ್ಭಗಳಲ್ಲಿ ಚುನಾವಣೆ ಪ್ರಕ್ರಿಯೆ ಕೈಗೊಳ್ಳುವ ಪ್ರಾಧಿಕಾರಗಳಿಗೆ ಚುನಾವಣೆ ನಡೆಸುವುದು… ಕಷ್ಟಸಾಧ್ಯವೆಂದು ಹಾಗೂ ಇಂತಹ ಪರಿಸ್ಥಿತಿಯನ್ನು “ಅಸಾಧಾರಣ ಪರಸ್ಥಿತಿ” (£೦£೧11೦೫೩ €17೮೬೫1574700) ಎಂದು ಉಲ್ಲೇಖಿಸಲಾಗಿರುತ್ತದೆ. ರಾಜ್ಯ ಚುನಾವಣಾ ಆಯೋಗವು, ಗ್ರಾಮ ಪಂಜಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿದೆ. ಪ್ರಸ್ತುತ ಪರಿಸ್ಥಿತಿಯನ್ನು “ಅಸಾಧಾರಣ ಪರಿಸ್ಥಿತಿ” (೧೮೯೫11೦೫೬೬ (೫೮೮115144೧೯) ಎ೦ದು ಪರಿಗಣಿಸಿ, ಭಾರತ ಸಂವಿಧಾನದ ಪರಿಚ್ಛೇದ 243-8 ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಪಂಚಾಯಿತಿಗಳ ಜುನಾವಣೆಗಳನ್ನು ನಡೆಸುವ ಸಂಬಂಧ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರಾಮ ಪಂಚಾಯಿತಿಗಳ ಸಾರ್ವಶ್ರಿಕ  ಜುನಾವಣೆಯನ್ನು ಅನಿವಾರ್ಯತೆಯಿಂದ ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ನಡಸುವ ಬಗ್ಗೆ ತೀರ್ಮಾನಿಸಲಾಗುವುದು, ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಿದೆ.

Please follow and like us:
error