ಗ್ರಾಮ ಪಂಚಾಯತಿ ಎಲೆಕ್ಚನ್ ನಲ್ಲಿ ಮಂಗಳಮುಖಿ ಸ್ಪರ್ಧೆ

ಕಾರಟಗಿ : ಗ್ರಾಮ ಪಂಚಾಯತಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಕೊಪ್ಪಳದ ಗ್ರಾಮೀಣ ಭಾಗದಲ್ಲಿ ಒಂದು ಕಡೆ ಯುವಕರು ಈ ಬಾರಿ ಹೆಚ್ಚಾಗಿ ಅಖಾಡದಲ್ಲಿದ್ದರೆ, ಇನ್ನೊಂದಡೆ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಲೈಂಗಿಕ ಅಲ್ಪಸಂಖ್ಯಾತೆ ಜಮುನಾ ಬೆನ್ನೂರು ಗ್ರಾಮದ ೧ ನೇ ವಾರ್ಡ್ ನಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಇದು ಎಲ್ಲರ ಗಮನ ಸೆಳೆದಿದೆ. ಈಗಾಗಲೇ ಲೈಂಗಿಕ ಅಲ್ಪಸಂಖ್ಯಾತರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜಕೀಯದಲ್ಲೂ ಎಂಟ್ರಿಯಾಗುವ ಮೂಲಕ ಜಮುನಾ ಗಮನ ಸೆಳೆದಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆ ಗೆ ಪಾತ್ರವಾಗಿದೆ.

ಗ್ರಾಮ ಪಂಚಾಯತ ಚುನಾವಣೆ ವಿಧಾನಾಸಭೆ ಹಾಗೂ ಲೋಕಸಭೆ ಚುನಾವಣೆಗಿಂತೂ ಹೆಚ್ಚು ಪೈಪೋಟಿಯಲ್ಲಿ ನಡೆಯುತ್ತಿದೆ.

Please follow and like us:
error