ಗ್ರಂಥಾಲಯ ಮಹಾವಿದ್ಯಾಲಯದ ಹೃದಯವಿದ್ದಂತೆ. ಜ್ಞಾನದ ಸಂಪತ್ತುಗಳಾಗಿದ್ದು ಅವು ವಿದ್ಯಾರ್ಥಿಗಳಿಗೆ ಮೌನವಾಗಿಯೇ ಬೋಧಿಸುತ್ತವೆ. ಒಂದು ಮಾಹಾವಿದ್ಯಾಯ ಶ್ರೇ?ತೆ, ಘನತೆ ಗ್ರಂಥಾಲಯ ಅವಲಂಬಿಸಿರುತ್ತದೆ ಅಂತಹ ಸುಸಜ್ಜಿತ, ಉತ್ತಮ ಸೌಕರ್ಯವಿರುವ ಬೃಹತ್ ಗ್ರಂಥಾಲಯ ಹೊಂದಿರುವದು ನಮ್ಮ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಹೆಮ್ಮೆಯಾಗಿದೆ ಎಂದು ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಜೆ. ಎಸ್. ಪಾಟೀಲ್ ಹೇಳಿದರು. ಶ್ರೀ ಗವಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದಿಂದ ಹಮ್ಮಿಕೊಂಡ ಗ್ರಂಥಾಲಯ ಪಿತಾಮಹ ಎಸ್ ಆರ್ ರಂಗನಾಥನ್ ಅವರ ಜನ್ಮದಿನದದಂದು ಆಚರಿಸುವ ರಾಷ್ಟ್ರೀಯ ಗ್ರಂಥಾಲಯದಿನದ ಆಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ‘ಎಸ್ ಆರ್, ರಂಗನಾಥ ಅವರು ತಮ್ಮ ಇಡೀ ಬದುಕನ್ನು ಗ್ರಂಥಾಲಯದ ಸೇವೆಗೆ ಸಮರ್ಪಿಸಿದ ಮಹಾನ್ ವ್ಯೆಕ್ತಿಯಾಗಿದ್ದಾರೆ. ಅವರಿಗೆ ನಿಜವಾದ ಗೌರವ ನೀಡಬೇಕಾದರೆ ಗ್ರಂಥಾಲಯ ರಚನೆ ಮತ್ತು ರಕ್ಷಣೆಯಾಗಬೇಕು. ಪುಸ್ತಕ ವಿದ್ಯಾರ್ಥಿಗಳ ಭವಿ?ವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ. ಗ್ರಂಥಾಲಯದ ಮಹತ್ವ ತಿಳಿಸಿ ವಿದ್ಯಾರ್ಥಿಗಳಿಗೆ ಸೂಕ್ತವಾಗಿ ಬಳಸಿಕೊಳ್ಳಲು ಎಲ್ಲ ಪ್ರಾಧ್ಯಾಪಕರು ಮಾರ್ಗದರ್ಶನ ಮಾಡಬೇಕು. ಉತ್ತಮ ಗ್ರಂಥಾಲಯವಿದ್ದರೆ ಅಧ್ಯಯನ, ಸಂಶೋಧನೆಗಳ ಕಾರ್ಯ ಅಧಿಕಗೊಳ್ಳುತ್ತದೆ. ಮಹಾವಿದ್ಯಾಲಯಗಳು ಇಂತಹ ಕಾರ್ಯಕ್ರಮಗಳಿಂದ ಗ್ರಂಥಾಲಯ ಕುರಿತು ಜಾಗೃತಿಮೂಡಿಸುವ ಕಾರ್ಯ ಮಾಡಬೇಕು ಅಂದಾಗ ಇಂತಹ ಜಯಂತೋತ್ಸವ ನಿಜಕ್ಕೂ ಅರ್ಥಪಡೆದುಕೊಳ್ಳುತ್ತವೆ ಎಂದು ಹೇಳಿದರು. ಮಹಾವಿದ್ಯಾಲಯದ ಗ್ರಂಥಪಾಲಕರಾದ ಮಹೇಶ್ ಬಿರಾದಾರ್ ಪ್ರಾಸ್ತಾವಿಕ ಎಸ್ .ಆರ್ ರಂಗನಾಥರ ಜೀವನ ಯಶೋಗಾಥೇಯನ್ನು ತಿಳೀಸಿದರು. ಸಹ ಪ್ರಾಧ್ಯಾಪಕರಾದ ಡಾ.ಬಸವರಾಜ ಪೂಜಾರ ಡಾ ದಯಾನಂದ ಸಾಲುಂಕೆ, ಸಹಾಯಕ ಪ್ರಾಧ್ಯಾಪಕರಾದ ಡಾ. ಕರಿಬಸವೇಶ್ವರ, ಡಾ. ಚನ್ನಬಸವ, ವಿನೋದ ಮೂಡಿಬಸನಗೌಡರ, ವೆಂಕಟೇಶ್ ನಾಯಕ್, ಅರುಣ್ ಎ ಜಿ, ಮಂಜುನಾಥ್ ಗಾಳಿ, ಡಾ.ಶಶಿಕಾಂತ ಉಮ್ಮಾಪುರೆ, ರಾಜು ಹೊಸಮನಿ ಶ್ರೀದೇವಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಡಾ. ನಾಗರಾಜ ದಂಡೋತಿ ಹೆಬ್ಬಾಳ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಗ್ರಂಥಾಲಯ ಮಹಾವಿದ್ಯಾಲಯದ ಹೃದಯವಿದ್ದಂತೆ : ಡಾ. ಜೆ. ಎಸ್ ಪಾಟೀಲ್’
Please follow and like us: