ಗೌರಿ ಹತ್ಯೆ ೩ ವರ್ಷ, ನಾವೆದ್ದು ನಿಲ್ಲದಿದ್ದರೆ ಬಳಗದ ಹೋರಾಟ


ಕೊಪ್ಪಳ, ಸೆ. ೦೪: ಸೆಪ್ಟೆಂಬರ್ ೫ ೨೦೧೭ ಹಿರಿಯ ಲೇಖಕಿ, ಸಾಮಾಜಿಕ ಚಿಂತಕಿ, ಪ್ರಗತಿಪರ ಪತ್ರಕರ್ತೆ ಗೌರಿ ಲಂಕೇಶರವರು ಹತ್ಯೆಯಾದ ದಿನ. ಮೂರು ವರ್ಷದ ನೋವಿನ ನೆನಪಿಗೆ ಹೋರಾಟದ ಕಿಚ್ಚು ಹಚ್ಚಲು “ನಾವೆದ್ದು ನಿಲ್ಲದಿದ್ದರೆ” ಸಮಾನ ಮನಸ್ಕರ ತಂಡ ರಾಜ್ಯದಾದ್ಯಂತ ಸಾಂಕೇತಿಕ ಹೋರಾಟ ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ ೫ ರಂದು ಬೆಳಿಗ್ಗೆ ೧೦-೩೦ಕ್ಕೆ ನಗರದ ಸಾಹಿತ್ಯ ಭವನದ ಹತ್ತಿರ ವಿವಿಧ ಸಾಮಾಜಿಕ ಕಾರ್ಯಕರ್ತರು “ನಾವೆದ್ದು ನಿಲ್ಲದಿದ್ದರೆ” ತಂಡದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಂವಿಧಾನ ರಕ್ಷಣೆ, ಮಹಿಳಾ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳ ರಕ್ಷಣೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ರಾಜ್ಯಮಟ್ಟದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಧುಮುಕಲು ವಿಸ್ತಾರ್ ಆಶಾ ವಿ. ಮತ್ತು ಸ್ವಾಭಿಮಾನಿ ಸಂಚಲನ ಸಮಿತಿಯ ಜ್ಯೋತಿ ಗೊಂಡಬಾಳ ಅವರ ನೇತೃತ್ವದಲ್ಲಿ ಸಾಂಕೇತಿಕ ಹೋರಾಟವನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರರು ಬೆಂಬಲಿಸಬೇಕು ಎಂದು ಸಂಚಲನ ಸಮಿತಿ ಕಾರ್ಯದರ್ಶಿ ವಿಜಯಲಕ್ಷ್ಮೀ ಗುಳೇದ್  ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜ್ಯೋತಿ ಗೊಂಡಬಾಳ ಮೊ : ೯೪೪೯೭೬೧೭೨೧ ಅವರನ್ನು ಸಂಪರ್ಕಿಸಬಹುದು. ಅಂದು ರಾಜ್ಯದಾದ್ಯಂತ ನಡೆಯುವ ಹೋರಾಟ ಫೇಸ್ಬುಕ್ ಲೈವ್ ಆಗಲಿದೆ, ಸರಕಾರದ ನಿಯಮ ಪಾಲಿಸಿ ಸ್ಥಳೀಯ ಆಡಳಿತದ ಮೂಲಕ ರಾಜ್ಯಪಾಲರಿಗೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.

Please follow and like us:
error