ಗೋಹತ್ಯೆ ನಿಷೇಧದ ಕಾಯ್ದೆಗೆ ಜೆಡಿಎಸ್ ವಿರೋಧ : ಹೆಚ್.ಡಿ.ದೇವೇಗೌಡ

 

ಬೆಂಗಳೂರು  : ಬಿ.ಜೆ.ಪಿ , ಸರ್ಕಾರ ಮತ್ತೊಮ್ಮೆ The Karnataka Prevention of Slaughter and Preservation of Cattle Bill , 2020 ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ , ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲಕಲ್ಲೋಲ ಮಾಡಲು ಹೊರಟಿದೆ . ಈ ವಿಧೇಯಕವನ್ನು ನಮ್ಮ ಪಕ್ಷ ಜಾತ್ಯಾತೀತ ಜನತಾದಳ ಸಂಪೂರ್ಣವಾಗಿ ವಿರೋಧಿಸುತ್ತದೆ  ಎಂದು ಮಾಜಿ ಪ್ರದಾನಿ , ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು

ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ The Karnataka Prevention of Cow Slaughter and Cattle Preservation Act , 1964 ಜಾರಿಯಲ್ಲಿರುತ್ತದೆ . > ಈ ಕಾಯಿದೆಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘಿಸಿದವರ ಮೇಲೆ ವಿಧಿಸಬಹುದಾದ ದಂಡ , ಜುಲ್ಮಾನೆ ಮತ್ತು ಇತರೆ ದಂಡನೆ ಬಗ್ಗೆ ಸೆಕ್ಷನ್ 11 , 12 , 13 ಮುಂತಾದವುಗಳಲ್ಲಿ ಅವಕಾಶವಿದೆ . > 2010 ನೇ ಇಸವಿಯಲ್ಲಿ ರಾಜ್ಯದಲ್ಲಿದ್ದ ಅಂದಿನ ಬಿ.ಜೆ.ಪಿ. ಸರ್ಕಾರ ತಂದ The Karnataka Prevention of Slaughter and Preservation of Cattle Bill , 2010 ರಲ್ಲ ಮೇಅನ ಕಾಯಿದೆಯಲ್ಲಿ ಕಾಣಿಸಿದ ದಂಡನೆ , ಜುಲ್ಮಾನೆ ಮತ್ತು ಇತರೆ ದಂಡನೆಗಳನ್ನು ಸಮಾಜದ ಕೆಲವೊಂದು ಸಮುದಾಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಈ ಸಮುದಾಯಗಳನ್ನು ಗೋಹತ್ಯೆ ಬಗ್ಗೆ ಗುರಿ ಮಾಡಲು ವಿಧಿಸಬಹುದಾದ ದಂಡ ಮತ್ತು ಜುಲ್ಮಾನೆಗಳನ್ನು 1 ದಿಂದ 7 ಪಟ್ಟು ಜಾಸ್ತಿ ಮಾಡಿ , ವಿಧಾನಮಂಡಲದ ಉಭಯ ಸದನಗಳಲ್ಲ ಮಂಡಿಸಲಾಯಿತು ,

> ಈ ವಿಧೇಯಕವನ್ನು ವಿರೋಧಿಸಿ ಅಂದಿನ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳು ಸದನದಲ್ಲಿ ಧರಣಿ ನಡೆಸಿದರೂ , ಈ ಧರಣಿ ಮಧ್ಯೆ ಈ ವಿಧೇಯಕವನ್ನು ಸದನದಲ್ಲಿ ಬಹುಮತ ಹೊಂದಿದ್ದ ಬಿ.ಜೆ.ಪಿ. ಸರ್ಕಾರ ಪಾಸ್ ಮಾಡಿಕೊಂಡು ರಾಜ್ಯಪಾಲರ ಅನುಮೋದನೆಗೆ ವಿಧೇಯಕವನ್ನು ಕಳುಹಿಸಲಾಯಿತು , > ಈ ಸಂದರ್ಭದಲ್ಲಿ ಅಂದಿನ ರಾಜ್ಯಪಾಲರ ಶ್ರೀ ಚತುರ್ವೇದಿ ಅವರನ್ನು ನಾನು ಮತ್ತು ನನ್ನ ಪಕ್ಷದ ಮುಖಂಡರೊಂದಿಗೆ ಭೇಟಿ ಮಾಡಿ ಈ ವಿಧೇಯಕಕ್ಕೆ ಅಂಗೀಕಾರ ನೀಡಬಾರದೆಂದು ಕೋರಿದೆ . > ಈ ವಿಧೇಯಕವನ್ನು ಅಂದಿನ ರಾಜ್ಯಪಾಲರು , ಈ ವಿಧೇಯಕದಲ್ಲಿ ಅಡಕವಾಗಿರುವ ಕೆಲವೊಂದು ನಿಬಂಧನೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿಗಳ ಅಂಗೀಕಾರ ಬೇಕೆಂದು ಕಳುಹಿಸಿದರು , * ಕೇಂದ್ರ ಸರ್ಕಾರ ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದಾಗ , ನಾನು ಮತ್ತು ನನ್ನ ಪಕ್ಷದ ಮುಖಂಡರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮಸೂದೆಯಲ್ಲಿರುವ ಹಲವು ನಿಬಂಧನೆಗಳು ಸಮಾಜದಲ್ಲಿರುವ ಸಮುದಾಯಗಳಿಗೆ ಮತ್ತು ರೈತ ಸಮುದಾಯಕ್ಕೆ ಮಾರಕವೆಂದು ಮನವರಿಕೆ ಮಾಡಿಕೊಡಲಾಯಿತು , > ತದನಂತರ , ರಾಜ್ಯದಲ್ಲಿ ಉಂಟಾದ ಸರ್ಕಾರದ ಬದಲಾವಣೆಯಲ್ಲಿ ಈ ಮಸೂದೆಯನ್ನು ವಾಪಸ್ ಪಡೆದು ನಿಷ್ಕ್ರಿಯಗೊಳಿಸಲಾಗಿದೆ . ಇಂತಹ ಹಿನ್ನೆಲೆಯಲ್ಲಿ ಬಿ.ಜೆ.ಪಿ , ಸರ್ಕಾರ ಮತ್ತೊಮ್ಮೆ The Karnataka Prevention of Slaughter and Preservation of Cattle Bill , 2020 ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ , ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲಕಲ್ಲೋಲ ಮಾಡಲು ಹೊರಟಿದೆ . ಈ ವಿಧೇಯಕವನ್ನು ನಮ್ಮ ಪಕ್ಷ ಜಾತ್ಯಾತೀತ ಜನತಾದಳ ಸಂಪೂರ್ಣವಾಗಿ ವಿರೋಧಿಸುತ್ತದೆ ,  ಎಂದು ಹೇಳಿದ್ಧಾರೆ.

Please follow and like us:
error