ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ – ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ    ನನ್ನ ೭.೫ ವರ್ಷದ ಅವಧಿಯಲ್ಲಿ ೬೦೦ಕ್ಕೂ ಹೆಚ್ಚು ಶಾಲಾ ಕೊಠಡಿಗಳು ನಿರ್ಮಾಣವಾಗಿದ್ದು ಕ್ಷೇತ್ರದಲ್ಲಿ ಆರೋಗ್ಯ ಹಾಗೂ ನೀರಾವರಿ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನವಭಾರತದ ನಿರ್ಮಾಪಕರಾದ ಶಿಕ್ಷಕರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ ಮಾತ್ರ   ವಿದ್ಯಾರ್ಥಿಗಳು ಸ್ಪರ್ದಾತ್ಮಕ ಯುಗದಲ್ಲಿ ಪೈಪೋಟಿಗೆ ಸಿದ್ದರಾಗಲು ಸಾದ್ಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು . ಅವರು ಇಂದು  ಹಿಟ್ನಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಹಿಟ್ನಾಳ, ಕಂಪಸಾಗರ, ಹುಲಗಿ, ಮುನಿರಾಬಾದ್ ಆರ್ ಎಸ್, ಹೊಸ ಲಿಂಗಾಪುg, ಹಳೇ ಲಿಂಗಾಪುರ, ಮುನಿರಾಬಾದ್ ಡ್ಯಾಂ, ಹೊಸಳ್ಳಿ ಹಾಗೂ ಮಟ್ಟಿ ಮುದ್ಲಾಪುರ, ಹೊಳೆ ಮುದ್ಲಾಪುರ ಗ್ರಾಮಗಳಲ್ಲಿ ಅಂದಾಜು ಮೊತ್ತ ೩ ಕೋಟಿಯ ಶಾಲಾ ಕಟ್ಟಡ ನಿರ್ಮಾಣ, ಕ್ಷೇಮಾಭಿವೃದ್ದಿ ಕೇಂದ್ರ (ಆರೋಗ್ಯ ಇಲಾಖೆ), ಅಂಬೇಡ್ಕರ್ ಭವನ, ಜಗಜೀವನ್‌ರಾವ್ ಸಮುದಾಯ ಭವನ, ಐಆರ್‌ಬಿ ಪೋಲೀಸ್ ಘಟಕದ ವಸತಿ ಗೃಹದಲ್ಲಿ ಒಳಚರಂಡಿ, ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೇರವೇರಿಸಿ ಮಾತಾನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕರೋನಾ ಮಾಹಾಮಾರಿಯಿಂದ ಸುಮಾರು ೧೦ ತಿಂಗಳುಗಳಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ದೂರುವಿದ್ದು ಆನ್‌ಲೈನ್ ಶಿಕ್ಷಣ ಪಡೆದಿರುವ ಅವರು ಮೋಬೈಲ್‌ಗೆ ಮೊರೆ ಹೋಗಿರುವುದು ಹೆಚ್ಚಾಗಿ ಕಂಡುಬರುತ್ತಿದೆ, ಆದ್ದರಿಂದ ಪ್ರತಿಯೊಬ್ಬ ಪಾಲಕರ ಹಾಗೂ ಶಿಕ್ಷಕರು ಕಡ್ಡಾಯವಾಗಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು ಈಗಾಗಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಾವುಗಳು ೨೧ನೇ ಸ್ಥಾನದಲ್ಲಿದ್ದು ಬರುವ ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೊದಲು ೧೦ನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲೆಯು ಬರುವಂತೆ ಶಿಕ್ಷಕರು ಕಠಿಣ ಶ್ರಮವಹಿಸಬೇಕು. ಜಿಲ್ಲೆಯಲ್ಲೆಯೇ ವಿದ್ಯಾರ್ಥಿಗಳಿಗೆ ಎಲ್ಲಾ ಶೈಕ್ಷಣಿಕ ಸೌಲಭ್ಯಗಳಿದ್ದು ವೈದ್ಯಕೀಯ ಕಾಲೇಜು, ಇಂಜಿನೀಯರಿಂಗ್ ಕಾಲೇಜು, ಸ್ನಾತಕೋತರ ಕೇಂದ್ರ ಹಾಗೂ ಪದವಿ ಕಾಲೇಜುಗಳು ಜಿಲ್ಲೆಯಲ್ಲಿ ಇರುವದರಿಂದ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಗೆ ಹೋಗುವ ಅನಿವಾರ್ಯತೆ ದೂರವಾಗಿದ್ದು ಸಕಲ ಶೈಕ್ಷಣೀಕ ಸೌಲಭ್ಯಗಳು ಲಭ್ಯ ಇರುವುದರಿಂದ ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಪಾಲಕರ ಹಾಗೂ ಕೊಪ್ಪಳದ ಕಿರ್ತಿಯನ್ನು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಬೀನಾಗೌಸ ಮಾಜಿ ಜಿಪಂ ಅಧ್ಯಕ್ಷ ಜನಾರ್ಧನ ಹುಲಗಿ, ತಾಪಂ ಅಧ್ಯಕ್ಷ ಬಾಲಚಂದ್ರನ್ ಗ್ರಾಪಂ ಅಧ್ಯಕ್ಷ ಯಮನೂರಪ್ಪ ಎಪಿಎಮ್‌ಸಿ ಅಧ್ಯಕ್ಷಷ ವಿಶ್ವನಾಥ ರಾಜು ಮಾಜಿ ಕೆಎಮ್ ಎಫ್ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ ನಗರಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್ ಮುಖಂಡರುಗಳಾದ ಕೃಷ್ಣರೆಡ್ಡಿ ಗಲಿಬಿ ಯಂಕಪ್ಪ ಹೊಸಳ್ಳಿ ವೆಂಕಟೇಶ ಕಂಪಸಾಗರ ನವೋದಯ ವಿರುಪಣ್ಣ ಖಾಜಾವಲಿ ಜವಳಿ ಪಾಲಾಕ್ಷಪ್ಪ ಗುಂಗಾಡಿ ಜಿಯಾವುದ್ದೀನ್ ಅಶೋಕ ಇಳಿಗೇರ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ತಹಶೀಲ್ದಾರ ಎನ್ ಬೀರಾದಾರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ಇನ್ನೂ ಅನೇಕ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Please follow and like us:
error