ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2021 ನೇರ ಪ್ರಸಾರ

ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತವಾಗಿರುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ  ಕಾರ್ಯಕ್ರಮಗಳ ನೇರ ಪ್ರಸಾರ ಕನ್ನಡನೆಟ್ ನಲ್ಲಿ ಸಿಗಲಿದೆ. ಕರೋನಾ ಕಾರಣಕ್ಕೆ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮತ್ತು  ರಥೋತ್ಸವದ ದಿನ ಈ ಸಲ ಮಠದ ಆವರಣಕ್ಕೆ ಭಕ್ತರು ಬರಬಾರದು ಎಂದು ಶ್ರೀಗಳು ವಿನಂತಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡನೆಟ್ ನ ಫೇಸ್ ಬುಕ್ , ಯುಟ್ಯೂಬ್ , ಟ್ವಿಟರ್ ಮತ್ತುಇನಸ್ಟಾಗ್ರಾಂನಲ್ಲಿ ನೇರ ಪ್ರಸಾರವಾಗಲಿವೆ. ಜನೇವರಿ 29,30 ಮತ್ತು 31ರಂದು ನಿರಂತರವಾಗಿ ಕಾರ್ಯಕ್ರಮಗಳನ್ನು ನೇರವಾಗಿ ಪ್ರಸಾರ ಮಾಡಲಾಗುತ್ತದೆ.

Please follow and like us:
error