ಗರಿಷ್ಠ 20 ಕ್ವಿಂಟಾಲ್ ಎಫ್.ಎ.ಕ್ಯೂ. ತೊಗರಿ ಖರೀದಿಗೆ ನಿರ್ಧಾರ : ವಿಕಾಸ್ ಕಿಶೋರ್ ಸುರಳ್ಕರ್

ಬೆಂಬಲ ಬೆಲೆ ಯೋಜನೆ : ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸಭೆ

ಕೊಪ್ಪಳ,   ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಖರೀದಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಹೇಳಿದರು.
ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೋವಿಡ್-19 ರೋಗದ ಹರಡದಂತೆ ಇರುವ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ತೊಗರಿ ಖರೀದಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತಿಚೆಗೆ (ಡಿ.16) ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಆದೇಶದಂತೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಸಲು ಕೃಷಿ ಮಾರಾಟ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕು.  ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ. 6000 ರಂತೆ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಖರೀದಿಸಬೇಕು.  ಖರೀದಿ ಪ್ರಕ್ರಿಯೆಯಡಿ ಕೋವಿಡ್-19 ರೋಗದ ಹರಡದಂತೆ ಇರುವ ಸರ್ಕಾರದ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ತೊಗರಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಎಕರೆಗೆ 7.50 ಕ್ವಿಂಟಾಲ್‌ನAತೆ ಒಬ್ಬ ರೈತರಿಂದ ಗರಿಸ್ಟ 20 ಕ್ವಿಂಟಲ್ ತೊಗರಿ ಖರೀದಿಸಲು ಹಾಗೂ ಜಿಲ್ಲೆಯ ಕೊಪ್ಪಳ, ಹಿರೇಸಿಂಧೋಗಿ, ಕನಕಗಿರಿ, ನವಲಿ, ಕುಕನೂರು, ಹನುಮಸಾಗರ, ತಾವರಗೇರಾದಲ್ಲಿ ತೊಗರಿ ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಖರೀದಿ ಕೇಂದ್ರಗಳ ವಿವರ;
ತೊಗರಿ ಖರೀದಿ ಕೇಂದ್ರಗಳು, ನೋಂದಣಿ, ಏಜನ್ಸಿ ವಿವರ ಇಂತಿದೆ.  ಕೊಪ್ಪಳ ಟಿ.ಎ.ಪಿ.ಎಂ.ಸಿ., ಹಿರೇಸಿಂಧೋಗಿ ಪಿ.ಎ.ಸಿ.ಎಸ್., ಕನಕಗಿರಿ ಪಿ.ಎ.ಸಿ.ಎಸ್., ನವಲಿ ಪಿ.ಎ.ಸಿ.ಎಸ್., ಕುಕನೂರು/ ಮಸಬಹಂಚಿನಾಳ ಪಿ.ಎ.ಸಿ.ಎಸ್., ಕುಷ್ಟಗಿ ಪಿ.ಎ.ಸಿ.ಎಸ್., ಹನುಮಸಾಗರ ಪಿ.ಎ.ಸಿ.ಎಸ್., ತಾವರಗೇರಾ ಪಿ.ಎ.ಸಿ.ಎಸ್., ಈ ಎಂಟು ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.  ಖರೀದ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದ್ದು,  ಕೊಪ್ಪಳ ಹಾಗೂ ಹಿರೇಸಿಂಧೋಗಿ ಕೇಂದ್ರಗಳಿಗೆ ಸಂಬAದಿಸಿದAತೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಮೊ.ಸಂ. 9902224089, ಕನಕಗಿರಿ ಹಾಗೂ ನವಲಿ ಕೇಂದ್ರಗಳಿಗೆ ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿ (ದರ್ಜೆ-2) ಹರೀಶ ಪತ್ತಾರ ಮೊ.ಸಂ. 9060893320, ಕುಕನೂರು ಕೇಂದ್ರಕ್ಕೆ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಕೇಂದ್ರ ಕಛೇರಿ ಕುಕನೂರು) ಪ್ರಭಾರ ಕಾರ್ಯದರ್ಶಿ ಎಸ್.ಶ್ಯಾಮ್ ಮೊ.ಸಂ. 8550858916, ಹನುಮಸಾಗರ ಹಾಗೂ ತಾವರಗೇರಾ ಕೇಂದ್ರಗಳಿಗೆ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನೀಲಪ್ಪಶೆಟ್ಟಿ ಮೊ.ಸಂ. 9916827751, ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ತೊಗರಿ ಖರೀದಿ, ನೋಂದಣಿ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್.ಶ್ಯಾಮ್ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ಕೃಷಿ ಮಾರಾಟ ಇಲಾಖೆಯ ಪ್ರೊಡಕ್ಷನ್ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error