ಗದಗ ಜಿಲ್ಲೆಯಾದ್ಯಂತ ಅಗಸ್ಟ 2ರವರೆಗೆ  ಪ್ರತಿಬಂಧಕಾಜ್ಞೆ


ರಾತ್ರಿ 8 ರಿಂದ ಮುಂಜಾನೆ 5 ರವರೆಗೆ ಸಂಚಾರ ನಿಷೇಧ ರವಿವಾರ ಲಾಕಡೌನ್
ಗದಗ : ರಾಜ್ಯ ಸರ್ಕಾರದ ನಿರ್ದೇಶನ ರೀತ್ಯ ಗದಗ ಜಿಲ್ಲೆಯಾದ್ಯಂತ  ಅಗಸ್ಟ 2 ರ ಮಧ್ಯರಾತ್ರಿಯವರೆಗೆ ಪ್ರತಿದಿನ ರಾತ್ರಿ 8 ರಿಂದ ಮುಂಜಾನೆ 5 ಗಂಟೆಯವರೆಗೆ ಅನಿವಾರ್ಯ ಕಾರಣ ಹೊರತುಪಡಿಸಿ ಎಲ್ಲ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿ ಹಾಗೂ ಈ ಅವಧಿಯಲ್ಲಿನ ಎಲ್ಲ ರವಿವಾರಗಳಂದು ಸಂಪೂರ್ಣ ಲಾಕಡೌನ ವಿಧಿಸಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.
         ಕೋವಿಡ್-19 ಸೋಂಕು ನಿಯಂತ್ರಣದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಹಾಗೂ ಸಾರ್ವಜನಿಕ ಆರೊಗ್ಯ ಹಿತ ದೃಷ್ಟಿಯಿಂದ ಸಾಂಕ್ರಾಮಿಕ ರೋಗ ಕಾಯ್ದೆ ಹಾಗೂ  ವಿಪತ್ತು ನಿರ್ವಹಣೆ ಕಾಯ್ದೆಯಡಿ ಹೊರಡಿಸಿರುವ ಈ ಆದೇಶ ಉಲ್ಲಂಘಿಸಿದವರ ಮೇಲೆ ಭಾರತೀಯ ದಂಡ ಸಂಹಿತೆ 188ರ ಹಾಗೂ ವಿಪತ್ತು ನಿರ್ವಹಣೆ ಕಾಯ್ದೆ ರೀತ್ಯ ಕ್ರಮ ಜರುಗಿಸಲಾಗುವುದು.  ಇದಲ್ಲದೇ 65 ವರ್ಷ ಮೀರಿದ  ಹಿರಿಯರು, 10 ವರ್ಷದೊಳಗಿನ ಮಕ್ಕಳ, ರೋಗಗ್ರಸ್ಥ ವ್ಯಕ್ತಿ ಗರ್ಭಿಣಿಯರ ಅನಿವಾರ್ಯ ಕಾರಣ ಕೊರತುಪಡಿಸಿ ಮನೆಯಲ್ಲಿಯೇ ಇರುವಂತೆ ಆದೇಶಿಸಲಾಗಿದೆ.  ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ   ಅಧಿಕಾರಿಗಳು , ಉಪವಿಭಾಗಾಧಿಕಾರಿಗಳು ಎಲ್ಲ ತಹಶೀಲ್ದಾರರು, ಸಂಬಂಧಿತ ಇಲಾಖೆಗಳ ಎಲ್ಲ ಅಧಿಕಾರಿಗಳು ಈ ಆದೇಶ ಪಾಲನೆ ಆಗುವಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Please follow and like us:
error