ಗಣರಾಜ್ಯೋತ್ಸವ ದಿನ ದಿಲ್ಲಿ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧು ಬಂಧನ

ಹೊಸದಿಲ್ಲಿ: ಗಣರಾಜ್ಯೋತ್ಸವ ದಿನ ದಿಲ್ಲಿಯಲ್ಲಿ ನಡೆದಿರುವ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದ ಪಂಜಾಬ್ ನಟ ದೀಪ್ ಸಿಧು ಅವರನ್ನು ದಿಲ್ಲಿ ಪೊಲೀಸ್ ಸ್ಪೆಷಲ್ ಸೆಲ್ ಮಂಗಳವಾರ ಬೆಳಗ್ಗೆ ಬಂಧಿಸಿದೆ.ಸಿಧು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಪರ ಪ್ರಚಾರ ಮಾಡಿದ್ದರು. ಸಿಧು ಹಾಗೂ ಇತರ ಇಬ್ಬರ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಕಳೆದ ವಾರ ದಿಲ್ಲಿ ಪೊಲೀಸರು ಘೋಷಿಸಿದ್ದರು.

ಆರೋಪಿಯನ್ನು ಬಂಧಿಸಲು ಪಂಜಾಬ್ ಹಾಗೂ ದಿಲ್ಲಿಯಲ್ಲಿ ಹಲವು ಬಾರಿ ದಾಳಿ ನಡೆಸಲಾಗಿತ್ತು. ಗಣರಾಜ್ಯೋತ್ಸವ ದಿನದ ಹಿಂಸಾಚಾರಕ್ಕೆ ಸಂಬಂಧಿಸಿ ಈ ತನಕ 44ಕ್ಕೂ ಅಧಿಕ ಎಫ್‍ಐಆರ್ ದಾಖಲಿಸಲಾಗಿದ್ದು, 127 ಜನರನ್ನು ಬಂಧಿಸಲಾಗಿದೆ.

Please follow and like us:
error