ಗಂಗಾವತಿ ಶಾಸಕರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಗಂಗಾವತಿ ನಗರದ ಬಸ್ ಘಟಕದ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಶಂಕುಸ್ಥಾಪನೆ.

ರೂ. 50.00 ಲಕ್ಷ ವೆಚ್ಚದಲ್ಲಿ ಗಂಗಾವತಿ ಬಸ್ ಘಟಕದಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವುದರ ಮೂಲಕ ಕ್ಷೇತ್ರದ ಜನಪ್ರಿಯ ಶಾಸಕ ಇಕ್ಬಾಲ್ ಅನ್ಸಾರಿ ಶಂಕುಸ್ಥಾಪನೆ ನೆರವೇರಿಸಿದರು,

ನೂತನ ಕಟ್ಟಡವು 8 ಆಡಳಿತ ಕಚೇರಿ ಕೊಠಡಿಗಳು ಹಾಗೂ 2 ವಿಶ್ರಾಂತಿ ಕೊಠಡಿಗನ್ನೋಳಗೊಂಡಿದೆ,

ಈ ಸಂಧರ್ಭದಲ್ಲಿ ಈ.ಕ.ರ.ಸಾ.ಸಂಸ್ಥೆ ಜಿಲ್ಲಾದಿಕಾರಿಗಳು , ಗಂಗಾವತಿ ಬಸ್ ಘಟಕದ ವ್ಯವಸ್ಥಾಪಕರು , ಈ.ಕ.ರ.ಸಾ.ಸಂಸ್ಥೆ ನಿರ್ದೇಶಕರಾದ ನೀಲಕಂಠಪ್ಪ ಹೊಸಳ್ಳಿ , ಗದ್ವಾಲ್ ಖಾಸೀಂ ಸಾಬ್ , ನಗರಸಭೆ ಸದಸ್ಯರಾದ ಹುಸೇನಪ್ಪ ಹಂಚಿನಾಳ , ಬಳ್ಳಾರಿ ರಾಮಣ್ಣ ನಾಯಕ ಉಪಸ್ಥಿತರಿದ್ದರು.

Please follow and like us:
error