ಗಂಗಾವತಿ ಯಲ್ಲಿ ಪ್ರತ್ಯಕ್ಷವಾದ ಕರಡಿ : ಕಂಗಾಲಾದ ಜನತೆ

ಗಂಗಾವತಿ : ಗಂಗಾವತಿ ನಗರದ ಜನತೆಗೆ ಒಂದಲ್ಲ ಒಂದು ಪ್ರಾಣಿಯ ಕಾಟ ತಪ್ಪುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಚಿರತೆ ಮತ್ತು ಕರಡಿಗಳು ಗಂಗಾವತಿ ಜನರ ನಿದ್ದೆಗೆಡಿಸಿವೆ. ನಿನ್ನೆಯಷ್ಟೆ ಚಿರತೆ ಬಾಲಕನ ಮೇಲೆ ದಾಳಿ ಮಾಡಿತ್ತು. ಅದೃಷ್ಟಾವಶಾತ್ ಬಾಲಕ ಬಚಾವಾಗಿದ್ದಾನೆ. ಇಂದು ಗಂಗಾವತಿ ಯ ತಹಶಿಲ್ದಾರರ ಕಛೇರಿ ಹಿಂಭಾಗದ ನೀರಿನ ಟ್ಯಾಂಕ್ ಬಳಿ‌ ಸಂಜೆ ಕರಡಿ ಪ್ರತ್ಯಕ್ಷವಾಗಿದೆ. ಗಣೇಶ ಗುಡಿ ಬಳಿ ಗುಡ್ಡದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಜನರನ್ನು ಕಂಗೆಡಿಸಿದೆ. ಜನರು ಹೊರಗಡೆ ತಿರುಗಾಡುವುದಕ್ಕೂ ಭಯಪಡುತ್ತಿದ್ದಾರೆ. ಶೀಘ್ರವೇ ಅರಣ್ಯ ಇಲಾಖೆಯವರು ಕರಡಿ ಮತ್ತು ಚಿರತೆಯನ್ನು ಹಿಡಿಯಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

Please follow and like us:
error