ಗಂಗಾವತಿ ನಗರಸಭೆ ಸದಸ್ಯನ ಅಪಹರಣಕಾರರ ಬಂಧನ

ಕನ್ನಡನೆಟ್ ನ್ಯೂಸ್ ಗಂಗಾವತಿ : ನಿನ್ನೆ ತಡರಾತ್ರಿ ಅಪಹರಣಕ್ಕೊಳಗಾಗಿದ್ದ ಗಂಗಾವತಿ ನಗರಸಭೆ ಸದಸ್ಯ ಮನೋಹರಸ್ವಾಮಿ ಯವರನ್ನು ರಕ್ಷಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ನಿನ್ನೆ ರಾತ್ರಿ ರೆಸ್ಟೋರೆಂಟ‌ನಲ್ಲಿ ಊಟ ಮಾಡುತ್ತಿದ್ದಾಗ ಮನೋಹರಸ್ವಾಮಿ ಯನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದರು.ಅಪಹರಣದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು
3 ಜನ ಬಿಜೆಪಿಯ ನಗರಸಭೆ ಸದಸ್ಯರು ಸೇರಿ ಇತರೆ 13 ಜನರ ವಿರುದ್ದ ದೂರು ದಾಖಲಾಗಿತ್ತು.ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲು  ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದರು. ನಿನ್ನೆ ರಾತ್ತಿಯೇ ಪೋಲಿಸರು ಕಾರ್ಯಾಚರಣೆ ಗೆ ಇಳಿದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಗರಸಭೆ ಸದಸ್ಯನನ್ನು ಅಪಹರಣ ಮಾಡಿದ ಬಿಜೆಪಿ ಕಾರ್ಯಕರ್ತರ ಬಂಧಿಸಿದ್ದಾರೆ. ಹಳಿಯಾಳದಲ್ಲಿ ವಸತಿ ಗೃಹಕ್ಕೆ ತೆರಳುವಾಗ ಗಂಗಾವತಿ ಪೊಲೀಸರ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಲಾಗಿದ್ದು ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿ ಪರಾರಿಯಾಗಿದ್ದಾನೆ

ಗಂಗಾವತಿಯ ನಕ್ಷತ್ರ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ಗಂಗಾವತಿ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಇಂದು ಗಂಗಾವತಿ ಗೆ ಮರಳಲಿದ್ದಾರೆ

Please follow and like us:
error