ಗಂಗಾವತಿಯಲ್ಲಿ ಹೊಸ ಕೃಷಿ ಮಹಾವಿದ್ಯಾಲಯ : ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ


ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜನ್ನು ಪ್ರಾರಂಭಿಸಲು ಮುಖ್ಯಮಂತ್ರಿಗಳಿಂದ ಅನುಮೋದನೆ
60 ಬೋಧಕ ವೃಂದ,  139 ಬೋಧಕೇತರ ವೃದಂದದ  ಹುದ್ದೆಗಳಿಗೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ :    ರೂ. 46.50 ಕೋಟಿಗಳ ಅನುದಾನ

ಕೊಪ್ಪಳ : ಜಿಲ್ಲೆಯ ಗಂಗಾವತಿಯಲ್ಲಿ ಹೊಸದಾಗಿ ಕೃಷಿ ಕಾಲೇಜನ್ನು ಶೈಕ್ಷಣಿಕ ವರ್ಷ 2020-21 ರಿಂದ ಪ್ರಾರಂಭಿಸಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ ಹಿನ್ನಲೇಯಲ್ಲಿ ಅಗತ್ಯವಾದ ರೂ. 46.50 ಕೋಟಿಗಳನ್ನು  ಹಾಗೂ ಬೋಧಕ ವೃಂದದ 60 ಮತ್ತು ಬೋಧಕೇತರ ವೃದಂದದ 139 ಹುದ್ದೆಗಳನ್ನು ಸೃಜಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.

ಇಲ್ಲಿ ಕೃಷಿ ಸಂಬಂಧಿಸಿದ ಕಾಲೇಜುಗಳು ಸಂಶೋಧನಾ ಕೇಂದ್ರಗಳು ಸ್ಥಾಪನೆಯಾಗಬೇಕೆಂಬ ದಶಕಗಳ ಬಹು ದಿನದ ಬೇಡಿಕೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈಗಾಗಲೇ ಗಂಗಾವತಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳು ಆರಂಭವಾಗಿವೆ.

ಪ್ರಸ್ತುತ ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಶಾಸಕರಾದ ಬಸವರಾಜ ದಡೇಸ್ಗೂರ, ಹಾಲಪ್ಪ ಆಚಾರ್ ಹಾಗೂ ರಾಯಚೂರು ಕೃಷಿ ವಿವಿಯ ಆಡಳಿತ ಮಂಡಳಿ ಸದಸ್ಯರನ್ನೊಳಗೊಂಡ ನಿಯೋಗ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ರನ್ನು ಭೇಟಿ ಮಾಡಿ ಮಂಜೂರಿಯಾಗಿರುವ ಕೃಷಿ ಮಹಾವಿದ್ಯಾಲಯ ಕಾಲೇಜು ಆರಂಭಕ್ಕೆ ಒತ್ತಡ ಹಾಕಿದ್ದರು.

ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪನೆಗೆ ಅವಶ್ಯವಿರುವ ಸಿಬ್ಬಂದಿಗಳ ವಿವರ ಮತ್ತು ಹಣಕಾಸಿನ ಕನಿಷ್ಟ ಅವಶ್ಯಕತೆಯ ವಿವರದೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜನ್ನು ಸ್ಥಾಪಿಸಲು ಅನುಮತಿಯನ್ನು ಕೋರಲಾಗಿತ್ತು. ಸರ್ಕಾರದ ಆದೇಶ ಸಂಖ್ಯೆ : ಎಜಿಆರ್ ಐ/32/2020, ಬೆಂಗಳೂರು ದಿನಾಂಕ 04.01.2021 ರ ಆದೇಶದಲ್ಲಿ ಸರ್ಕಾರದ ಕೃಷಿ ಇಲಾಖೆ(ಸೇವೆಗಳು ಮತ್ತು ಸಮನ್ವಯ) ಅಧೀನ ಕಾರ್ಯದರ್ಶಿ ಜೋನ್ ಪ್ರಕಾಶ ರೋಡ್ರಿಗಸ್  ಅವರು 04 ಜನವರಿ 2021 ರಂದು ಹೊರಡಿಸಿರುವ ಆದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ಕಾಲೇಜು ಆರಂಭಕ್ಕೆ ಅನುಮತಿಸಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಗಂಗಾವತಿಗೆ ಹೊಸದಾಗಿ ಮಂಜೂರಿಯಾಗಿದ್ದ  ಕೃಷಿ ಮಹಾವಿದ್ಯಾಲಯವನ್ನು ಇದೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ಅಗತ್ಯ ಆರ್ಥಿಕ ನೆರವು  ಮತ್ತು ಸಿಬ್ಬಂದಿ ಮಂಜೂರಾತಿಯೊಂದಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶಿಸಿರುವದು ಈ ಪ್ರದೇಶದಲ್ಲಿ ಕೃಷಿ ಸಂಬಂಧಿಸಿದ ಅಧ್ಯಯನಕ್ಕೆ ಮತ್ತಷ್ಟು ಅನುಕೂಲತೆ ಸಿಕ್ಕಿದೆ, ಇದೊಂದು ಐತಿಹಾಸಿಕವಾಗಿದ್ದು, ಕೃಷಿ ಕೇತ್ರದಲ್ಲಿ ಬೆಳವಣಿಗೆಗೆ ಪೂರಕವಾಗಿದೆ : ಸಂಗಣ್ಣ ಕರಡಿ, ಸಂಸದರು. ಕೊಪ್ಪಳ.

ಕೃಷಿ ಕಾಲೇಜು ಆರಂಭ ಜನಪ್ರತಿನಿಧಿಗಳ ಹರ್ಷ :
ಗಂಗಾವತಿಯಲ್ಲಿ ಕೃಷಿ ಮಹಾವಿದ್ಯಾಲಯವನ್ನು  ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಕ್ಕೆ ಮುಖ್ಯ ಮಂತ್ರಿಗಳು ಅನುಮೋದನೆಯನ್ನು ನೀಡಿದ್ದು, ಕೃಷಿ ಇಲಾಖೆಯಿಂದ ಕಾಲೇಜು ಆರಂಭಕ್ಕೆ 04 ಜನವರಿ 2021 ರಂದು ರೂ. 46.50 ಕೋಟಿಗಳನ್ನು ಹಾಗೂ ಅಗತ್ಯ ಸಿಬ್ಬಂದಿಗಳನ್ನು ಮಂಜೂರಿ ಮಾಡಿರುವದಕ್ಕೆ ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗರ್, ಹಾಲಪ್ಪ ಆಚಾರ್, ಹಾಗೂ ಕೃಷಿ ವಿವಿಯ ಆಡಳಿತ ಮಂಡಳಿ ಸದಸ್ಯರು ಹರ್ಷವನ್ನು ವ್ಯಕ್ತಪಡಿಸಿ, ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸಿರುವರು.


ಜಿಲ್ಲೆಯ ಗಂಗಾವತಿಯಲ್ಲಿ ಹೊಸದಾಗಿ ಕೃಷಿ ಕಾಲೇಜನ್ನು ಗಂಗಾವತಿಯಲ್ಲಿ ಕಾರ್ಯನಿರತವಾಗಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಾಲೇಜನ್ನು ಪ್ರಾರಂಭಿಸಿ, ಕಾಲೇಜನ್ನು ಪ್ರಾರಂಭಿಸಲು ಅಗತ್ಯವಾದ ರೂ. 46.50 ಕೋಟಿಗಳನ್ನು  ಹಾಗೂ ಬೋಧಕ ವೃಂದದ 60 ಮತ್ತು ಬೋಧಕೇತರ ವೃದಂದದ 139 ಹುದ್ದೆಗಳನ್ನು ಸೃಜಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ  4 ಜನವರಿ 2021 ರಂದು ಆದೇಶ ನಿಡಿದೆ.

Please follow and like us:
error