ಗಂಗಾವತಿಯಲ್ಲಿ ಬಿಜೆಪಿ ಭರ್ಜರಿ ಸಮಾವೇಶ

ಕೊಪ್ಪಳ : ಎರಡನೇ ಹಂತದ ಚುನಾವಣೆ ನಡೆಯಲಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಇಂದು ಬಿಜೆಪಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿತು. ಖುದ್ದು ಪ್ರದಾನಿ ನರೇಂದ್ರ ಮೋದಿ ಆಗಮಿಸಿದ್ದರಿಂದ ಬಿಜೆಪಿ ಕಾರ್ಯಕರ್ತರಿಗೆ ಭರ್ಜರಿ ಶಕ್ತಿ ಬಂದಂತಾಗಿದೆ. ೧ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಸಮಾವೇಶದಲ್ಲಿ ಬಳ್ಳಾರಿ,

ರಾಯಚೂರು, ಕೊಪ್ಪಳದಿಂದ ಕಾರ್ಯಕರ್ತರು ಭಾಗವಹಿಸಿದ್ದರು. ಮೂರು ಲೋಕಸಭಾ ಕ್ಚೇತ್ರದ ಅಭ್ಯರ್ಥಿಗಳು ಆಗಮಿಸಿದ್ದರಿಂದ ಮೊದಲ ಬಾರಿಗೆ ನರೇಂದ್ರ ಮೋದಿ ಗಂಗಾವತಿ ಗೆ ಆಗಮಿಸಿದ್ದರಿಂದ ಬಹಳಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶ್ರೀರಾಮುಲು , ಶಾಸಕ ಸೋಮಶೇಖರ ರೆಡ್ಡಿ, ಬಸವರಾಜ ದಡೇಸೂಗೂರು, ರಾಜುಗೌಡ, ಪರಣ್ಣ ಮುನವಳ್ಳಿ, ಶಿವರಾಜ ಪಾಟೀಲ್ ಕೆ. ರತ್ನಪ್ರಭ , ಲೋಕಸಭೆ ಅಭ್ಯರ್ಥಿಗಳಾದ ದೇವೆಂದ್ರಪ್ಪ, ಕರಡಿ ಸಂಗಣ್ಣ, ಅಮರೇಶ ನಾಯಕ , ಸಿಂಗನಾಳ ವಿರುಪಾಕ್ಷಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error