fbpx

ಖಾಯಿಲೆಯ ಸಿನಿಮಾಗಳು ಮತ್ತು ಜೀವನೋತ್ಸಾಹ- D J Chakravarthy Chandrachud

ನೀವು ಯಾವುದೇ ಖಾಯಿಲೆಗಳ ಸಿನಿಮಾ ನೋಡಿ ಜೀವನೋತ್ಸಾಹ ಪುಟಿಯುತ್ತದೆ,,ನನ್ನ ಕಣ್ಣಲ್ಲಿ ಸಾವಿನ ಜೀವಂತಿಕೆ ತುಂಬಿದವ ಆನಂದ್ ಸಿನಿಮಾದ ಕಾಕಾ ರಾಜೇಶ್ ಖನ್ನಾ …ಬಾಬು ಮೊಶಾಯರ್ ಎಂಬ ಆ ಆದ್ರ ದನಿಯ ಟೇಫು ಕೇಳಿದಾಗಲೆಲ್ಲ ಜೀವ ಪುಟಿಯುತ್ತದೆ…
ಬಂಧನದ ದಾದಾ ವಿಷ್ಣುವರ್ಧನ್ ಇದ್ದಾರಲ್ಲ ಇವರ ಬಹುತೇಕ ಸಿನಿಮಾಗಳದು ಇದೇ ಜೀವಪುಟಿಯುವ ಕಥೆ ಅವರ ಕಣ್ಣು ನೋವಿಗದ್ದಿದ ಕುಂಚದಹಾಗೆ …ಅದೆಂತಹ ಮೋಹಕತೆ ಎಂತಹ ಜೀವ ಹಿಂಡುವ ನೋವೂ ಕೂಡ ವಿಷ್ಣುರ ಮುಖದಲ್ಲಿ ನಗುವಾಗಿ ಅರಳುತ್ತದೆ….
ಈ ಸಾವಿಗೂ ಕಲಾವಿದರಿಗೂ ಎಂತದೋ ನಂಟಿದೆ.
ಫ್ರೆಂಚ್ ಬಿರಿಯಾನಿಯ ಮೊದಲ ಶಾಟೇ ನಮ್ಮ ಮೈಕಲ್ ಮಧುವಿನ ಸಾವು…ಅದೇ ಅವರ ಕೊನೆಯ ಚಿತ್ರ ..ಮಧು ಮೆರವಣಿಗೆಗೂ ಹೆಣ ಹೊರಲು ನಾಲ್ಕು ಜನ ಇರಲಿಲ್ಲ,..
ವಿಷ್ಣು ಅವರನ್ನ ಭೇಟಿಯಾದಾಗಲೆಲ್ಲ ಸಾವಿನ ನಂತರದ ಬದುಕಿನ ಅಮೂರ್ತತೆಯ ಬಗ್ಗೆ ಮಾತಾಡಿದ್ದೇ ಹೆಚ್ಚು..
ಸುಂದರಕಾಂಡ ಅನ್ನೋ ಸಿನಿಮಾದಲ್ಲಿ ಆಕ್ಸಿಡೆಂಟ್ ದೃಶ್ಯ ಬಾಕಿ ಉಳಿಯಿತು ನಿಜವಾದ ಅಪಘಾತದಲಿ ಶಂಕರ್ ನಾಗ್ ಹೊರಟರು…
ಹಿರಿಯ ನಟ ಮಾನು ಅರಸಿಕೆರೆ ಬಳಿ ಅಪಘಾತಕ್ಕೀಡಾದರು ಯಾರೇ ರಾತ್ರಿ ಪಾರ್ಟಿ ಮುಗಿಸಿಮನೆ ತಲುಪಿದ ಮೇಲೆ,ಎಲ್ಲರಿಗೂ ಸೇಫಾ ತಲುಪಿದರಾ ಅಂತ ಕೇಳುವ ಹವ್ಯಾಸವಿತ್ತು ಅವರಿಗೆ ನಾನು ನಾಳೆಯಿಂದ ಕೇಳಲ್ಲ ನೀವೆಲ್ಲ ಜೋಪಾನ ಅಂತ ಆ ಪಾರ್ಟಿಯಲಿ ರೋಪು ಹಾಕಿದ್ರು… ಅವತ್ತೇ ರಾತ್ರಿ ಅಪಘಾತದಲಿ ಹೋದರು…
ಹೀಗೆ ಹಲವಾರು ಉದಾಹರಣೆಗಳಿವೆ.ತಲೇಲಿ ಇವೆಲ್ಲ ಓಡಲು ಶುರು ಆಗಿದ್ದು ಸುಶಾಂತ್ ಸಿಂಗನ ಕೊನೆಯ ಸಿನಿಮಾ ದಿಲ್ ಬೇಚಾರಾ ನೋಡಿದಾಗ,
ನನಗಂತೂ ಅವನಿಲ್ಲ ಅವನ ಕಡೆಯ ಸಿನಿಮಾ ಎಂಬುದನೆಲ್ಲಾ ಪಕ್ಕಕಿಟ್ಟು ನೋಡಲಾಗಲಿಲ್ಲ.ಅದೇ ಮನಸಲಿ ನೋಡಿದೆ .ಅವನ ಸಾವನ್ನೇ ಅವನು ನಟಿಸಿದ್ದಾನೆ.ಖಾಯಿಲೆಯಲ್ಲಿ ಜೀವನದ ಉತ್ಸುಕತೆಯನ್ನು ನಟಿಸುವುದು ಸುಲಭದ ಮಾತಲ್ಲ,ನಾಗಾರ್ಜುನರ ಗೀತಾಂಜಲಿ ನೋಡಿದವರಿಗೆ ಅದನ್ನ ಅನುಭವಿಸಿದವರಿಗೆ ಗೊತ್ತು ಆ ಸುಖ,ದಿಲ್ ಬೇಚಾರಾ ಕೂಡ ಇಬ್ಬರು ಸಾವಿಗೆ ಹತ್ತಿರವಿರುವ ರೋಗಿಗಳ ಕಥೆ.ಅಸ್ತಿತ್ವ ಸಾವಿನ ದಿನಾಂಕದ ಗುಟ್ಟು ಬಿಟ್ಟು ಕೊಟ್ಟರೆ ಮನುಷ್ಯ ಏನೇನು ಮಾಡಬಲ್ಲ ಎಂಬ ಪ್ರಯೋಗದಂತಿದೆ,
ಸುಶಾಂತನ ಸಾವಿನ ನಂತರ ಅವನೇ ಚಿತ್ರಿಸಿದ ವೀಡಿಯೋಗಳು ಬರುವಾಗ ಹೋಗಿಬಿಟ್ಟನಲ್ಲಾ ಪರಿಶ್ರಮದಿಂದ ಬೆಳೆದ ಪ್ರತಿಭಾವಂತ ಎಂದು ಕೊರಗಲಾಗದೇ ಇರಲಿಲ್ಲ.,.
ಸಿನಿಮಾ ಕಲಾವಿದರಿಗೊಂದು ನಂಬಿಕೆ ಇದೆ.ಸಾವಿನ ಶಾಟ್ ತೆಗೆದರೆ ಅದೇ ಸೇಮ್ ಆಂಗಲ್ ನಲ್ಲಿ ಬದುಕಿ ಏಳುವ ಶಾಟ್ ತೆಗೆದಿಡುತ್ತಾರೆ,ನಾನೀಗ ನಟಿಸಿರುವ ನಾಲ್ಕು ಸಿನಿಮಾದಲ್ಲೂ ನಿರ್ದೇಶಕರು ನನ್ನ ಪಾತ್ರಗಳನು ಸಾಯಿಸಿದ್ದಾರೆ ಕಥೆಗನುಗುಣವಾಗಿ.ಕ್ಯಾಮರಾಮನ್ಗಳು ಬಿಡದೇ ಬದುಕಿ ಏಳುವ ಶಾಟ್ ತೆಗೆದಿದ್ದಾರೆ ,ಅವನ್ನು ನಾನೂನಿರ್ದೇಶಕರಿಂದ ಕೇಳಿ ತೆಗೆದುಕೊಂಡಿದ್ದೇನೆ,
ಸುಶಾಂತನ ದಿಲ್ ಬೇಚಾರಾ ಪ್ರಮೋದಲ್ಲೂ ಸತ್ತ ಹಾಗೆ ಅಭಿನಯಿಸಿದ ಮೇಲೆ ಎದ್ದು ಬರುವ ದೃಶ್ಯವಿದೆ. ಹೀಗೇ ಎದ್ದು ಬರಬಾರದೇನಯ್ಯ ಅನ್ನಿಸಿತು.
ಅವನ ಸಾವನ್ನ ಅವನೇ ನಟಿಸಿ ತಾನು ಸತ್ತ ಮೇಲೆ ಏನೆಲ್ಲ ಅಭಿಪ್ರಾಯ ಹೇಳುತ್ತಾರೆಂಬುದನ್ನೂ ರೆಕಾರ್ಡ್ ಮಾಡುವ ದೈಶ್ಯದಲಿ ನಟಿಸಿ ಹೋಗಿದ್ದಾನೆ,ಜಾನ್ ಬೇಚಾರಾ!
“ರೋಗವನ್ನು ನಟಿಸುವುದು ಸುಲಭದ ಮಾತಲ್ಲ ಅದಕ್ಕೆ ತುಂಬಾ ಆರೋಗ್ಯ ಬೇಕು”

D J Chakravarthy Chandrachud

Please follow and like us:
error
error: Content is protected !!