ಖಾತೆ ಬದಲಾವಣೆ ಮಾಡುವುದು ಸಿಎಂ ಪರಮಾಧಿಕಾರ- ಕೃಷಿ ಸಚಿವ ಬಿ.ಸಿ.ಪಾಟೀಲ್


ಕೊಪ್ಪಳ : ಸರ್ಕಾರ ತಂದಿರೋ ಎಪಿಎಂಸಿ ಕಾಯ್ದೆ ರೈತ ಪರ ಇದೆ,ಕೆಲವರು ರೈತರಿಗೆ ಪ್ರಚೋದಿಸಿ ಹೋರಾಟಕ್ಕೆ ಕುಮ್ಮಕ್ಕು ನೀಡ್ತಿದ್ದಾರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಖಾತೆಯ ಹಂಚಿಕೆ ಸಂಬಂದಿಸಿದಂತೆ ಅರಣ್ಯ ಖಾತೆ ಬದಲಾವಣೆ ಮಾಡಿದ್ದರಿಂದ ಆನಂದ್ ಸಿಂಗ್ ಸ್ವಲ್ಪ ಮುನಿಸುಗೊಂಡಿರೋದು ಸತ್ಯ ಇಂದು ಧ್ವಜಾರೋಹಣದ ನಂತರ ಆನಂದ್ ಸಿಂಗ್ ಸಿಎಂ ಭೇಟಿ ಮಾಡಲಿದ್ದಾರೆ, ಎಚ್. ವಿಶ್ವನಾಥ ಅವರದು ಬೇರೆಯ ವಿಚಾರ. ಜನರಿಂದ ಆಯ್ಕೆ ಆಗಿಯೇ ಸಚಿವರು ಆಗಬೇಕು ಅಂತಾ ಕೋರ್ಟ್ ಹೇಳಿದೆ ಈ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ನೀಡಲು ಆಗಿಲ್ಲ . ಖಾತೆ ಬದಲಾವಣೆ ಮಾಡುವುದು ಸಿಎಂ ಪರಮಾಧಿಕಾರ, ಅವರಿವರು ರಾಜೀನಾಮೆ ಕೊಡ್ತಾರೆ ಎಂಬುದು ಎಲ್ಲ ನೀವೆ ಹೇಳ್ತಿರೋದು ಎಂದು ಹೇಳಿದರು.

Please follow and like us:
error