ಖಾತೆಗಳ ಬದಲಾವಣೆ : ರಾಜ್ಯಪಾಲರ ಆದೇಶ

ಬೆಂಗಳೂರು : ನಿನ್ನೆಯಿಂದಲೇ ಬಹಳಷ್ಟು ಚರ್ಚೆಗೊಳಗಾಗಿದ್ದ ಖಾತೆ ಬದಲಾವಣೆ ಅಧಿಕೃತಗೊಂಡಿದ್ದು ರಾಜ್ಯಪಾಲ ವಜೂಬಾಯಿ ವಾಲಾ ಖಾತೆ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.  ಆರೋಗ್ಯ ಖಾತೆಯನ್ನು ಬಿ.ಶ್ರೀರಾಮುಲು ಅವರಿಂದ ಹಿಂದಕ್ಕೆ ಪಡೆದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ನೀಡಿ ಮುಖ್ಯಮಂತ್ರಿ. ಬಿ.ಎಸ್‌. ಯಡಿಯೂರಪ್ಪ ಸೋಮವಾರ ಅದೇಶ ಹೊರಡಿಸಿದ್ದಾರೆ.ಹಾಗೇ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಲೋಕೋಪಯೋಗಿ ಇಲಾಖೆ ನೀಡಲಾಗಿದೆ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ.

 

Please follow and like us:
error