ಕೌದಿ ಕಲೆ ಖ್ಯಾತಿಯ ಗಂಗಾಬಾಯಿ ಇನ್ನಿಲ್ಲ

ಕೌದಿ ಕಲೆಯಲ್ಲಿ ಪರಿಣಿತರಾಗಿದ್ದ ಗಂಗಾಬಾಯಿ ದೇಸಾಯಿ (75) ಅವರು ಇಂದು ಹಾಸನದಲ್ಲಿ ಹೃದಯಾಘಾತದಿಂದ ನಿಧನರಾದರು. ಕೌದಿ ಕಲೆಯನ್ನು ಪ್ರಸಿದ್ಧಿಗೊಳಿಸಿದವರಲ್ಲಿ ಗಂಗಾಬಾಯಿ ಅವರು ಪ್ರಮುಖರು. ಕೌದಿ ಪ್ರದರ್ಶನ ಮೂಲಕವೂ ಗಮನ ಸೆಳೆದಿದ್ದರು.

ಅವರ ಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿದ್ದವು. ಮೂಲತಃ ಬಸವನ ಬಾಗೇವಾಡಿ ಭಾಗದವರಾದ ಗಂಗೂಬಾಯಿ ಅವರ ಮೂವರು ಪುತ್ರರಲ್ಲಿ ಚಿತ್ರ ಕಲಾವಿದರಾದ ಬಿ.ಎಸ್.ದೇಸಾಯಿ ಅವರು ಒಬ್ಬರು. ಪತಿ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ:
ಗಂಗಾಬಾಯಿ ಅವರ ನಿಧನಕ್ಕೆ ರಂಗಸಿರಿ, ಹಸಿರು ಭೂಮಿ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ

Please follow and like us:
error