ಕೌಡೇ ಪೀರ ಹಬ್ಬವನ್ನು ಸರಳ ಹಾಗೂ ಶಾಂತಿಯುತವಾಗಿ ಆಚರಿಸಿ- ಉಜ್ಜಿನಕೊಪ್ಪ

Kannadanet NEWS

ಕೊಪ್ಪಳ : ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಭಾರೀ ಕೌಡೇ ಪೀರ ಹಬ್ಬವನ್ನು ಸರಳವಾಗಿ ಹಾಗೂ ಶಾಂತಿಯುತವಾಗಿ ಆಚರಿಸಲು ಗಂಗಾವತಿ ಜನತೆಗೆ ಡಿವೈಎಸ್ಪಿ ಆರ್.ಎಸ್ ಉಜ್ಜಿನಕೊಪ್ಪ ಅವರು ಕರೆ ನೀಡಿದರು. ಅವರು ಜಿಲ್ಲೆಯ ಗಂಗಾವತಿಯ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೌಡೇ ಪೀರ ಹಬ್ಬ ಎಲ್ಲಾ ಧರ್ಮದ ಜನರ ಭಾವೈಕ್ಯತೆಯ ಹಬ್ಬವಾಗಿದ್ದು, ಪ್ರತಿವರ್ಷವೂ ಎಲ್ಲಾ ಸಮುದಾಯ ಜನರು ಕೌಡೇ ಪೀರ ಹಬ್ಬವನ್ನು ಸಂಭ್ರಮದಿಂದ ಭಾವೈಕ್ಯತೆಯ ಸಂಕೇತವಾಗಿ ಆಚರಿಸುತ್ತಿದ್ದರು. ಆದರೆ ಈ ಭಾರೀ ಕೊರೊನಾ ವೈರಸ್ ಅಟ್ಟಹಾಸದಿಂದ ಜನರಿಗೆ ತೊಂದರೆ ಆಗದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸರಳವಾಗಿ ಆಚರಣೆ ಮಾಡಿ ಎಂದು ತಿಳಿಸಿದರು. ಇನ್ನು ಮೊಹರಂ ಹಬ್ಬದ ನಿಮಿತ್ಯ ಹೊರಡಿಸಿದ್ದ ಮಾರ್ಗಸೂಚಿಗಳಂತೆ ಕೌಡೇ ಪೀರ ಹಬ್ಬದಲ್ಲಿ ಅದೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಪಿಐ ವೆಂಕಟಸ್ವಾಮಿ, ನಗರದ ಪ್ರಮುಖರಾದ ಶ್ಯಾಮೀದ್ ಮನಿಯಾರ್, ಸೈಯದ್ ಅಲಿ, ಹನುಮಂತಪ್ಪ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Please follow and like us:
error