ಕೋವಿಡ್-19 : ಸಂಪರ್ಕಿತರ ಮಾಹಿತಿ ಸಂಗ್ರಹಕ್ಕೆ ವಾಟ್ಸಾಪ್ ಗ್ರೂಪ್ : ಸುರಳ್ಕರ್ ವಿಕಾಸ್ ಕಿಶೋರ್

ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡಲು ಸ್ವಯಂ ಸೇವೆಗೆ ಮುಂದೆ ಬನ್ನಿ : ಸುರಳ್ಕರ್ ವಿಕಾಸ್ ಕಿಶೋರ್


ಕೊಪ್ಪಳ, : ಕೋವಿಡ್-19 ಪ್ರಕರಣಗಳು ಹೆಚ್ಚಾಗದಂತೆ ಕೊಪ್ಪಳ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಥಮಿಕ ಮತ್ತು ದ್ವಿತೀಯಾ ಸಂಪರ್ಕಿತರ ಮಾಹಿತಿ ಸಂಗ್ರಹಕ್ಕೆ ವಾಟ್ಸಾಪ್ ಗ್ರೂಪ್ ರಚಿಸಿದ್ದು, ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡಲು ಸ್ವಯಂ ಸೇವೆಗೆ ಸಾರ್ವಜನಿಕರು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ಕೊವೀಡ್-19 ಆ್ಯಪ್ ಹಾಗೂ ಸೊಂಕಿತರ ಸಂಖ್ಯೆ ಕಡಿಮೆ ಮಾಡಲು ವಾಟ್ಸಾಪ್ ಗ್ರೂಪ್ ರಚಿಸಿರುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು (ಜುಲೈ.24) ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೊರೋನಾ ಪತ್ತೆ ಹಚ್ಚಲು 270ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿಗೆ ಒಂದು ತಂಡ ಹಾಗೂ ನಗರ ಪ್ರದೇಶದಲ್ಲಿ ಎರಡು ವಾರ್ಡುಗಳಿಗೆ ಒಂದು ತಂಡದAತೆ ತಂಡಗಳನ್ನು ರಚಿಸಲಾಗಿದೆ.  ತಂಡಗಳು ಸೊಂಕಿತರನ್ನು ಪತ್ತೆ ಹಚ್ಚವುದರ ಜೊತೆ ಸೊಂಕಿತರ ಪ್ರದೇಶಗಳನ್ನು ಹಾಗೂ ಸೊಂಕಿತರೊAದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ ಬಗ್ಗೆಯೂ ಪತ್ತೆ ಮಾಡಲಿವೆ.  ಅಲ್ಲದೇ ಈ ನಿಟ್ಟಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ಗ್ರಾಮೀಣ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಟೆಕ್ನಿಕಲ್‌ನಲ್ಲಿ ಪ್ರವೀಣತೆಯನ್ನು ಉಳ್ಳ ಜನರು ಜಿಲ್ಲಾಡಳಿತದ ವತಿಯಿಂದ ಸ್ಥಾಪಿತವಾದ ವಾಟ್ಸಾಪ್ ಗ್ರೂಪ್ ಮೂಲಕ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ ಜನರ ವಿವರವನ್ನು ಸಂಗ್ರಹಕ್ಕೆ ಕೈಜೋಡಿಸಬೇಕು ಎಂದರು.
ಕರೋನಾ ದೃಢಪಟ್ಟವರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಮಾಹಿತಿಯನ್ನು ನೀಡಲು ಇಚ್ಚಿಸುವವರು ವಾಟ್ಸಾಪ್ ಗ್ರೂಪ್ ನಂಬರ್ 8792011835 ನೊಂದಿಗೆ ಭಾಗವಹಿಸಬಹುದು.  ಮೊದಲಿಗೆ ಗ್ರಾಮೀಣ ಮಟ್ಟದಲ್ಲಿ ವಾಸವಾಗಿರುವವರಿಗೆ ಆದ್ಯತೆ ನಿಡಲಾಗುವುದು.  ಆಸಕ್ತ ಸೇವಕರು ಹೆಸರು ಮತ್ತು ತಮ್ಮ ಖಚಿತ ವಿಳಾಸ ಹಾಗೂ ಖಡ್ಡಾಯವಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.  ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ವಯಂ ಸೇವಕರ ಸಹಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿದ್ದು, ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಎಂದು ಹೇಳಿದರು.
ಕೊರೋನಾ ಸಾಂಕ್ರಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಮಾಜದ ಏಳ್ಗೆಗೆ ಅಥವಾ ಕೊರೋನಾ ಸೊಂಕನ್ನು ತೆಡೆಗಟ್ಟಲು ಆಸಕ್ತ ಯುವಕರು ಈ ವಾಟ್ಸಾಪ್ ಗ್ರೂಪ್‌ಗೆ ಕೇವಲ ಸಂದೇಶಗಳನ್ನು ಕಳುಹಿಸಲು ಅವಕಾಶವನ್ನು ನೀಡಲಾಗಿದ್ದು, ಯಾವುದೇ ರೀತಿಯ ಕರೆಗಳಿಗೆ ಒತ್ತನ್ನು ನೀಡಲಾಗಿರುವುದಿಲ್ಲ ಎಂದು ಸಾರ್ವಜನಿಕರಿಗೆ ಸ್ಪಷ್ಟಪಡಿಸಿದರು.  ಯಾರಿಗೆ ಲಕ್ಷಣಗಳನ್ನು ಕಂಡುಬAದಿದ್ದರೆ ಅಂತವರು ಸ್ವಯಂ ಪ್ರೇರಿತವಾಗಿ ಚಿಕಿತ್ಸೆಗೆ ಬರಲು ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error