ಕೋವಿಡ್ -19: ಭಾರತದಲ್ಲಿ ಸಾವಿನ ಸಂಖ್ಯೆ 50

ಹೊಸದಿಲ್ಲಿ, ಎ.2: ಕೊರೋನ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ಏರುತ್ತಿದ್ದು,  ಈ ವರೆಗೆ  1,965 ಪೊಸಿಟಿವ್ ಪ್ರಕರಣ ಪತ್ತೆಯಾಗಿದೆ.

ಭಾರತದಲ್ಲಿ ಕೋವಿಡ್ -19 ಸಂಬಂಧ ಮೃತಪಟ್ಟವರ ಸಂಖ್ಯೆ 50 ತಲುಪಿದೆ. ಜಾಗತಿಕವಾಗಿ ಸುಮಾರು 45,000 ಮಂದಿ ಬಲಿಯಾಗಿದ್ದಾರೆ 

ಭಾರತದಲ್ಲಿ  ಕಳೆದ 4 ದಿನಗಳಲ್ಲಿ ಕೊರೋನ ವೈರಸ್ ಪ್ರಕರಣಗಳು ಏರಿಕೆಯಾಗಿದ್ದು, ಆರೋಗ್ಯ ಸಚಿವಾಲಯವು ಈವರೆಗೆ 1,828 ಪೊಸಿಟಿವ್  ಪ್ರಕರಣಗಳನ್ನು ದೃಢಪಡಿಸಿದೆ. ಕೊರೋನ ವೈರಸ್‌ ಸೋಂಕಿತ 41 ಮಂದಿ ಸಾವನ್ನಪ್ಪಿದ್ದಾರೆ ಎಂದು  ಸರಕಾರ ತಿಳಿಸಿದೆ.

ಕೊರೋನ ವೈರಸ್ ನಿಂದ  ಅತ್ಯಂತ ಹೆಚ್ಚು ತೊಂದರೆಗೊಳಗಾದ ದೇಶಗಳು

ದೇಶ              ಒಟ್ಟು ಪ್ರಕರಣಗಳು           ಸಾವಿನ ಸಂಖ್ಯೆ

ಅಮೆರಿಕ                2,15,215                     5,110

ಇಟಲಿ                 1,10, 574                   13,155

ಸ್ಪೇನ್                  1,04,118                     9,387

ಚೀನಾ                    81,554                     3,312

ಜರ್ಮನಿ                  77,981                       931

ಇತರ ದೇಶಗಳಲ್ಲಿ    3,46,515                  15,350

Please follow and like us:
error