ಕೋವಿಡ್ -19 ನಿಂದ ತಮಿಳುನಾಡಿನ  ಡಿಎಂಕೆ ಶಾಸಕ ಜೆ.ಅನ್ಬಾಜಗನ್ ನಿಧನ

ಡಿಎಂಕೆ ಶಾಸಕ ಜೆ.ಅನ್ಬಾಜಗನ್ ಅವರು ಕೋವಿಡ್ -19 ನಿಂದ ಚೆನ್ನೈನ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು  ಚೆಪಾಕ್- ಟ್ರಿಪ್ಲಿಕೇನ್ ಶಾಸಕರಾಗಿದ್ದ ಜೆ.ಅನ್ಬಾಜಗನ್ ಕೊರೊನಾವೈರಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಸೋಮವಾರ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಡಿಎಂಕೆ ಪಿತಾಮಹ ಎಂ ಕರುಣಾನಿಧಿಗೆ ಹತ್ತಿರವೆಂದು ಪರಿಗಣಿಸಲ್ಪಟ್ಟ ಜೆ.ಅನ್ಬಾಜಗನ್  ಪಕ್ಷದ ಚೆನ್ನೈ ಪಶ್ಚಿಮ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಅವರು ಜೂನ್ 2 ರಂದು ತೀವ್ರ ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡಿದ್ದರು ಮತ್ತು ಆಸ್ಪತ್ರೆಗೆ ದಾಖಲಾದ ನಂತರ ಕರೋನವೈರಸ್ ಟೆಸ್ಟ್ ರಿಜಲ್ಟ್ ಪಾಜಿಟಿವ್ ಬಂದಿತ್ತು ತಮಿಳುನಾಡಿನಲ್ಲಿ ಕೋವಿಡ್ -19 ರಿಂದ ನಿಧನರಾದ ಮೊದಲ ಶಾಸಕ ಇವರು. ಮಹಾರಾಷ್ಟ್ರದ ನಂತರ ತಮಿಳುನಾಡು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ, 34,914 ಕೋವಿಡ್ -19 ಪ್ರಕರಣಗಳು ಮಂಗಳವಾರದವರೆಗೆ ವರದಿಯಾಗಿವೆ. ಇವುಗಳಲ್ಲಿ 16,282 ಸಕ್ರಿಯ ಪ್ರಕರಣಗಳು ಮತ್ತು ವೈರಸ್‌ನಿಂದ 307 ಸಾವುಗಳು ಸೇರಿವೆ.

 

Please follow and like us:
error