ಕೋವಿಡ್-೧೯ ಮರಳಿ ಸೃಷ್ಠಿಕರ್ತನ ಕಡೆಗೆ : ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ರಾಷ್ಟ್ರ ವ್ಯಾಪ್ತಿ ಅಭಿಯಾನ


Kannadanet NEWS ಕೊಪ್ಪಳ : ಜಗತ್ತು ಇಂದು ತೀರ ಆತಂಕದೊಂದಿಗೆ ಸಾಗುತ್ತಿದೆ. ಜಗತ್ತು ಈ ಮೂದಲು ಸಾಂಕ್ರಾಮಿಕ ರೋಗ ಮತ್ತು ಅವಘಡಗಳನ್ನು ಕಂಡಿದೆ, ದೊಡ್ಡ ಮಟ್ಟದಲ್ಲಿ ವಿನಾಶವೂ ಆಗಿವೆ. ಆದರೆ ಕೋವಿಡ್ ೧೯ ಸೊಂಕು ನಿಜವಾಗಿಯೊ ಜಗತ್ತಿನಾದ್ಯಾಂತ ವ್ಯಾಪಿಸಿ ವಿಶೇಷತಃ ನಮ್ಮ ದೇಶದಲ್ಲಿ ಶೀಘ್ರವಾಗಿ ಹಬ್ಬುತ್ತಾ ಮಾನವ ಅಸಹಯಾಕತೆಯನ್ನು ಅನಾವರಣಗೋಳಿಸಿತಿದೆ. ರೋಗವು ಕೋಟಿಗಟ್ಟಲೆ ಜನರನ್ನು ಬಾಧಿಸಿ ಲಕ್ಷಗಟ್ಟಲೆ ಜನರನ್ನು ಬಲಿತೆಗೆದುಕೊಂಡಿದೆ ಆದ್ದರಿಂದ ದೇವನೆಡೆಗೆ ಮರಳುವುದು, ತನ್ನ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು ದೇವನೊಂದಿಗಿನ ಸಂಬಂಧವನ್ನು ಬಲ ಪಡಿಸುವುದು ಈ ಪರಿಸ್ಥಿತಿಯ ನೈಜ ಪಾಠವಾಗಿದೆ ಹಾಗಾಗಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕೋವಿಡ್ -೧೯ ಮರಳಿ ಸೃಷ್ಠಿಕರ್ತನ ಕಡೆಗೆ ಎಂಬ ರಾಜ್ಯ ವ್ಯಾಪ್ತಿ ಅಭಿಯಾನ ಆಗಷ್ಟ ೦೫ ರಿಂದ ೨೦ರ ವರೆಗೆ ಕೈಗೊಂಡಿದೆ ಎಂದು ಕೊಪ್ಪಳ ಘಟಕದ ಅಧ್ಯಕ್ಷ ಅಬ್ದುಲ್ ಶುಕೂರ್‌ಸಾಬ್ ಹೇಳಿದರು.
ಅವರು ಅಭಿಯಾನಕ್ಕೆ ಚಾಲಾನೆ ನೀಡಿ ಮಾತನಾಡುತ್ತಿದ್ದರು, ರೋಗಕ್ಕೆ ಈವರೆಗೆಚಿಕಿತ್ಸೆ ಇಲ್ಲ, ವ್ಯಾಕ್ಸಿನ್ ಶೀಘ್ರವಾಗಿ ಲಭ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಾರ್ವಜನಿಕ ಆರೋಗ್ಯ ರಂಗದ ಜಾಗತಿಕ ತಜ್ಙರು ಈ ರೋಗ ದಿರ್ಘಕಾಲದವರೆಗೆ ಮುಂದುವರೆಯುವ ಮತ್ತು ಕೆಲವು ದಶಕಗಳಲ್ಲಿ ವಿಶ್ವದ ಜನಸಂಖ್ಯೆಯನ್ನು ೨೫% ಕಡಿತ ಗೋಳಿಸಬಹುದೆಂದು ಎಚ್ಚರಿಸಿದ್ದಾರೆ. ಹಸಿವು ನಿರೊದ್ಯೋಗ, ಆರ್ಥಿಕ ವಿನಾಶ, ಜೀವನ ಶೈಲಿಯಲ್ಲಿ ಅಸಮಾನ್ಯ ಬದಲಾವಣೆ ನಮ್ಮ ಕಣ್ಣ ಮುಂದೆ ಇವೆ. ಭೂಕಂಪನ, ನೆರೆ, ಕಾಡ್ಗಿಚ್ಚು, ಗೃಹ ಕಲಹಗಳು, ಯುದ್ದ ಮತ್ತು ಪರಿಸರ ವಿನಾಶಗಳಂತಹ ಸಣ್ಣ ಮತ್ತು ದೊಡ್ಡ ವಿಪತ್ತುಗಳ ಕೋನೆಗಾಣದ ಸರಣಿಗೆ ಮಾನವರು ಬಲಿಯಾಗುತ್ತಾ ಇದ್ದರೆ. ಮಾನವ ಜೀವನದ ರಕ್ಷಣೆ ರೋಗದ ಪ್ರಭಾವವನ್ನು ಕುಗ್ಗಿಸಲು ಮತ್ತು ಸೊಂಕು ಹರಡುವುದನ್ನು ತಡೆಯಲು ಈ ಸಂದರ್ಭದಲ್ಲಿ ಸರ್ಕಾರ ಮತ್ತು ಆರೋಗ್ಯ ತಜ್ಙರಿಂದ ನಿರ್ದೇಶಿಸಲ್ಪಡುತ್ತಿರುವ ಸುರಕ್ಷತಾ ವ್ಯವಸ್ಥೆ ಮತ್ತು ಮುಂಜಾಗೃತಾಕ್ರಮಗಳು ಅತ್ಯಗತ್ಯ, ಅವುಗಳ ಪಾಲನೆಯು ಅಗತ್ಯ ಆದರೆ ಪರಿಸ್ಥಿತಿಯ ಏರುಪೇರುಗಳಲ್ಲಿ ಕಾರ್ಯವೆಸಗುವ ಎರಡು ದೊಡ್ಡ ವಾಸ್ತವಿಕೆಗಳನ್ನುಮರೆಯಲಾಗದು, ಒಂದು ಈ ವಿಶ್ವದ ಸೃಷ್ಠಿಕರ್ತನ ಆಸಾಮಾನ್ಯ ಸಾಮರ್ಥ್ಯ ಮತ್ತು ಎರಡನೆಯದಾಗಿ ಕರ್ಮಗಳ ಪರಿಣಾಮದ ಕುರಿತು ಅಛಲ ನಂಬಿಕೆ ಸಾಮಾನ್ಯ ಜೀವನದಲ್ಲಿ ಮಾನವ ಈ ವಾಸ್ತವಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಇದೇ ಅವನ ಇಹ ಪರ ವಿನಾಶಕ್ಕೆ ಕಾರಣವಾಗುತ್ತದೆ. ಈ ನೈತಿ ತತ್ವ ನೆನಪಿನಲ್ಲಿಡುವ ಅಗತ್ಯವಿದೆ.
ನಮ್ಮ ಜಮಾಅತೆ ಇಸ್ಲಾಮಿ ಹಿಂದ್‌ನ ಅಂಗ ಸಂಸ್ಥೆಗಳಾದ ಹ್ಯೂಮನೆಟರಿಯನ್ ರಿಲೀಫ್ ಸೊಸೈಟಿಯು ಕೊಡಗು ಮತ್ತು ಮೆನಾಡು ಪ್ರದೇಶಗಳಲ್ಲಿ ಮಳೆಯಿಂದ ಆದ ಅನಾಹುತ ಸಂದರ್ಭದಲ್ಲಿ ನಿರಾಶ್ರೀತರನ್ನು ರಕ್ಷೀಸಿ ಪುರ್ನವಸತಿ ಕಲ್ಪಸುವುದು ಹಾಗೂ ಮನೆಗಳನ್ನು ನಿರ್ಮಿಸಿಕೊಡುವುದು, ನೆರೆ ಪ್ರದೇಶಗಳಲ್ಲಿ ಅಲ್ಲಿಯು ಜನರಿಗೆ ಪುರ್ನವಸತಿ ಕಲ್ಪಸುವುದು ಮತ್ತು ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಮತ್ತು ಕಾರ್ಮಿಕರಿಗೆ ರೇಷನ್ ಕಿಟ್‌ಗಳನ್ನು ಹಂಚುವುದು ಇನ್ನು ಅನೇಕ ಸಮಾಜ ಮುಖಿ ಕಾರ್ಯಗಳನ್ನು ಜಮಾಅ ಕೈಗೊಂಡಿದೆ. ಈ ಸಾಂಕ್ರಾಮಿಕ ರೋಗಬಾದಿತ ಜನರಿಗೆ ಯಾವುದೆ ಭೇದಭಾವವಿಲ್ಲದೆ ಸಹಾಯ ಒದಗಿಸುವುದು, ಮುಂಜಾಗ್ರತಾಕ್ರಮಗಳ ಬಗ್ಗೆ ಮಾಹಿತಿ, ಮಾಸ್ಕ ಇತ್ಯಾದಿಗಳ ಪೂರೈಕೆ, ವೈದ್ಯಕೀಯ ಸವಲತ್ತುಗಳ ಬಗ್ಗೆ ಮಾರ್ಗದರ್ಶನ ಧನ ಸಹಾಯ ಮಾಡುವುದು, ಹೆಲ್ಪಲೈನ್ ಕೋವಿಡ್- ೧೯(೦೮೦ ೪೬೮೦೯೯೯೮)ನ ಮೂಲಕ ಡಾಕ್ಟರ್‍ಸ್ ಪಾರ್ ಹೋಮ್ಯಾನಿಟಿಯ ವತಿಯಿಂದ ಡಾಕ್ಟರ್‍ಸ್, ಹೆಚ್ ಆರ್ ಎಸ್ ವಾಲೆಂಟಿರಿಯಸ್ ನೀಡುತ್ತಿರುವ ಸೇವಾ ಕಾರ್ಯಗಳನ್ನು ವ್ಯವಸ್ಥಿತಗೊಳಿಸುವ ಅಗತ್ಯವಿದೆ. ಮಸೀದಿ ಮುಹಲ್ಲಾ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ನಡೆಸುವುದು. ಜನರಲ್ಲಿ ಧೈರ್ಯ, ಅಲ್ಲಾಹನ ಮೇಲಿನ ಭರವಸೆ, ದೇವಸ್ಮರಣೆ, ಸಹನೆಯ ಉಪದೇಶನೀಡಿ ದೇವ ಸಹಾಯ, ಪರಿಸ್ಥಿತಿಯ ಸುಧಾರಣೆಗಾಗಿ ಪ್ರಾರ್ಥನೆಯ ವ್ಯವಸ್ಥೆಮಾಡುವುದು, ಜನ ಸಾಮಾನ್ಯರಿಗೆ ದೇವನನ್ನು ಪರಲೋಕವನ್ನು ನೆನಪಿಸಿ ದೇವನ ದಾಸ್ಯರಾಧನೆಯಕಡೆಗೆ ಕರೆನೀಡಿ ಅದರ ಬೇಡಿಕೆಗಳನ್ನು ತಿಳಿಸಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಈ ಅಭಿಯಾನದ ಸಂಚಾಲಕ ಕಲಿಮುಲ್ಲಾ ಖಾನ್, ಸೈಯದ್ ಹಿದಯತ್ ಅಲಿ, ಮಹಮ್ಮದ್ ಫಹಿಮುದ್ದಿನ್, ಅಸ್ಗರ್ ಖಾನ್, ಜಕ್ರಿಯಾ ಖಾನ್, ಇನ್ನು ಮುಂತಾದವರು ಉಪಸ್ಥಿರಿದ್ದರು.

Please follow and like us:
error