ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಡಿಸಿ,ಎಸ್ಪಿ,ಎಡಿಸಿ

 

 

ಕೊಪ್ಪಳ : ಕೋವಿಡ್ ವಾರಿಯರ್ಸ್‌ ಗಳಿಗೆ ಲಸಿಕೆನೀಡುವ ಅಭಿಯಾನದ

ಅಂಗವಾಗಿ   ಅಧಿ

 

ಕಾರಿಗಳು ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು   ಆ

ಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡರು. ಕೊಪ್ಪಳ ಜಿಲ್ಲೆಯಾದ್ಯಂತ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಂಡರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ , ಎಸ್ಪಿ ಟಿ.ಶ್ರೀ

ಧರ, ಎಡಿಸಿ ಎಂ.ಪಿ.ಮಾರುತಿ, ಡಿಎಚ್ ಓ ಅಲಕನಂದಾ, ಹಾಗೂ ಗಂಗಾವತಿಯಲ್ಲಿ ಡಿಎಸ್ಪಿ ರುದ್ರೇಶ ಉಜ್ಜನಿಕೊಪ್ಪ,  ಲಸಿಕೆ ಹಾಕಿಸಿಕೊಂಡರು. ಲಸಿಕೆ ಹಾಕಿಸಿಕೊಂಡ ನಂತರ ಅವರ ಆರೋಗ್ಯದ ತಪಾಸಣೆ ಮಾಡಲಾಯಿತು. ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎನ್ನುವುದು ಖಾತ್ರಿ ಪಡಿಸಲಾಯಿತು. ಆಯಾ ತಾಲೂಕಾ ಕೇಂದ್ರಗಳಲ್ಲಿ ಆಸ್ಪತ್ರೆಗಳಲ್ಲಿ ಲಸಿಕೆಯ ವ್ಯವಸ್ಥೆ ಮಾಡಲಾಗಿದ್ದು ಎಲ್ಲರೂ ಪಡೆದುಕೊಳ್ಳಬೇಕು ಎಂದು ಡಿಸಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

Please follow and like us:
error