ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿ : ವಿಕಾಸ್ ಕಿಶೋರ್ ಸುರಳ್ಕರ್

ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರೊಂದಿಗೆ ಜಿಲ್ಲಾಧಿಕಾರಿಗಳ ಸಂವಾದ ಕಾರ್ಯಕ್ರಮ

ಕೊಪ್ಪಳ,  : ಜಿಲ್ಲೆಯಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಯ ಚುನಾಯಿತ ಸದಸ್ಯರು ನಿಮ್ಮ ವಾರ್ಡಿನಲ್ಲಿ ಜನರು ಸ್ವಯಂಪ್ರೇರಿತರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ನಡೆದ ಕೋವಿಡ್ -19 ತಡೆಗಟ್ಟಲು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಚುನಾಯಿತ ಸದಸ್ಯರ ಜೊತೆಗಿನ ಸಂವಾದ ಕಾರ್ಯಕ್ರವವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪತ್ರಿ ನಿತ್ಯ ಸರಾಸರಿ 1200 ರಿಂದ 1500 ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಅದರಲ್ಲಿ 100 ಜನರಲ್ಲಿ 15 ಜನರಂತೆ ಪ್ರತಿದಿನ 150 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದೃಢವಾಗುತ್ತಿವೆ. ಜಿಲ್ಲೆಯಲ್ಲಿ ಒಟ್ಟು 20 ಕೊರೊನಾ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ನಗರ ಪ್ರದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವುದು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಕರ್ತವ್ಯವಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿರುವುದು ಸಮಸ್ಯೆಯಲ್ಲ. ಬದಲಾಗಿ ಕೋವಿಡ್ ಪರೀಕ್ಷೆಗೆ ಜನರು ಮುಂದಾಗದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಕೋವಿಡ್‌ನ ಸಾಮಾನ್ಯ ಲಕ್ಷಣಗಳಾದ ಜ್ವರ, ಕೆಮ್ಮು ಕಂಡುಬAದರೂ ಜನರು ಆಸ್ಪತ್ರಗೆ ಬರಲು ಹಾಗೂ ಕೋವಿಡ್ ಪರೀಕ್ಷೆಗೆ ಒಳಗಾಗಲು ಹಿಂಜರಿಯುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳು ಇರುವ ಬಹುತೇಕರು ಕೋವಿಡ್ ಪರೀಕ್ಷೆಗೆ ಒಳಗಾಗಗದೇ ಕೋವಿಡ್‌ನಿಂದ ತೀವ್ರ ಹಾನಿಯುಂಟಾದ ಮೇಲೆ ಜಿಲ್ಲಾಸ್ಪತ್ರಗೆ ಬಂದು ದಾಖಲಾಗುತ್ತಾರೆ. ಅಷ್ಟರಲ್ಲಿ ಕೋವಿಡ್‌ನಿಂದ ಶ್ವಸಕೋಶ ಹಾನಿಯಾಗಿ ಉಸಿರಾಟದ ತೊಂದರೆಯಿAದ ಆಕ್ಸಿಜನ್ ಪೂರೈಕೆ ಮಾಡಿದರೂ ಬದುಕಲಾರದ ಸ್ಥಿತಿಗೆ ತಲುಪುತ್ತಾರೆ. ಆದ್ದರಿಂದ ನಿಮ್ಮ ವಾರ್ಡುಗಳಲ್ಲಿ ಕೋವಿಡ್ ಲಕ್ಷಣಗಳಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿ. ನಿಮ್ಮೊಂದಿಗೆ ವಾರ್ಡಿನ ಪ್ರಮುಖರು, ಯುವಕರು, ಎನ್.ಜಿ.ಒ ಗಳ ಒಂದು ತಂಡವನ್ನಾಗಿ ರಚಿಸಿಕೊಂಡು ಪ್ರತಿ ಮನೆಗೆ ತೆರಳಿ ಲಕ್ಷಣವುಳ್ಳವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸಿ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್‌ನಿಂದ ಪ್ರತಿದಿನ 5 ರಿಂದ 6 ಸಾವು ಸಂಭವಿಸುತ್ತಿವೆ. ಇವರಲ್ಲಿ ಬಹುತೇಕರು ಕೋವಿಡ್‌ನ ಸಾಮಾನ್ಯ ಲಕ್ಷಣಗಳನ್ನು ಅಲಕ್ಷಿಸಿ ಸೂಕ್ತ ಚಿಕಿತ್ಸೆಯಿಲ್ಲದೆ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ ವೈದ್ಯರ ಪ್ರಯತ್ನದ ನಂತರವೂ ಸಾವು ಸಂಭವಿಸುತ್ತದೆ. ವಾರ್ಡಿನಲ್ಲಿ ಸ್ಥಿತಿವಂತರಿರುವ ಮನೆಗಳಲ್ಲಿ ಪಲ್ಸ್ ಆಕ್ಸಿಮೇಟರ್‌ನ್ನು ಸ್ವಯಂ ಖರೀದಿಸಿ ವಯೋವೃದ್ಧರ, ಇತರೆ ಖಾಯಿಲೆಗಳಿಂದ ಬಳಲುತ್ತಿರುವವರು ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ಆಕ್ಸಿಜನ್ ಪ್ರಮಾಣ 80 ಕ್ಕಿಂತ ಕಡಿಮೆಯಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ವೆಂಟಿಲೇಟರ್ ಅಗತ್ಯ ತಲುಪುವ ಹಂತದವರೆಗೂ ಕಾಯದೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ತಿಳುವಳಿಕೆ ಮೂಡಿಸಿ ಎಂದರು.
ಜಿಲ್ಲೆಯಲ್ಲಿ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಕೋವಿಡ್ ಪರೀಕ್ಷೆಯನ್ನು ಮಾಡಲು 4-5 ಆಸ್ಪತ್ರೆಗಳನ್ನು ಸೇರಿಸಿ ಒಂದು ಲ್ಯಾಬೋರೇಟರಿ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 26 ವೆಂಟಿಲೇಟರ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 15 ವೆಂಟಿಲೇಟರ್‌ಗಳ ಇನ್‌ಸ್ಟಾಲೇಷನ್ ಕಾರ್ಯ ಪ್ರಗತಿಯಲ್ಲಿದೆ. ಉಸಿರಾಟದ ತೊಂದರೆಯಿAದ ಬಳಲುವವರು ಲಕ್ಷಣ ಕಾಣಿಸಿಕೊಂಡ ಕೂಡಲೆ ಪರೀಕ್ಷೆಗೆ ಒಳಪಟ್ಟು ಆಸ್ಪತ್ರೆಗೆ ದಾಖಲಾಗಬೇಕು. ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದ್ದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ಈ ಕುರಿತು ವಾರ್ಡುಗಳಲ್ಲಿ ಸಭೆ, ಜಾಗೃತಿ ಕಾರ್ಯಕ್ರಮ, ಮೈಕುಗಳಲ್ಲಿ ಘೋಷಣೆಗಳ ಮೂಲಕ ಅರಿವು ಮೂಡಿಸುವುದು ಚುನಾಯಿತ ಸದಸ್ಯರ ಜವಾಬ್ದಾರಿ. ಹಾಗೆಯೇ ಪಾಸಿಟಿವ್ ಪ್ರಕರಣ ಕಂಡುಬAದ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಮಾನಸಿಕ ಸ್ಥೆöÊರ್ಯ ತುಂಬಬೇಕು. ಕೊರೊನಾಗೆ ನಿರ್ದಿಷ್ಟ ಔಷಧಿ ಇಲ್ಲ. ಆದರೆ ಲಕ್ಷಣಾಧಾರಿತ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ನೀಡುವುದರ ಮೂಲಕ ಇತರೆ ಖಾಯಿಲೆಗಳಿದ್ದರೂ ಕೋವಿಡ್‌ನಿಂದ ಗುಣಮುಖರಾಗಬಹುದು ಎಂಬುದನ್ನು ಜನರಲ್ಲಿ ಮನವರಿಕೆ ಮಾಡಿ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಯಾವ ವ್ಯಕ್ತಿ ಮಾಸ್ಕ್ ಧರಿಸದೆ ಜನಜಂಗುಳಿಯಲ್ಲಿ ಸುತ್ತಾಡವರೋ ಅಂತವರು ಸಮಾಜಕ್ಕೆ ತುಂಬಾ ಅಪಾಯಕಾರಿ. ಅವರಿಂದಲೇ ನೂರಾರು ಜನರಿಗೆ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ನಮ್ಮಿಂದ ಇತರರಿಗೆ ಸೋಂಕು ಹರಡಬಾರದು ಎಂಬ ಸಾಮಾಜಿಕ ಜವಾಬ್ದಾರಿಯಿಂದ ಕಟ್ಟುನಿಟ್ಟಿನ ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿ. ಜಿಲ್ಲೆಯಲ್ಲಿ ಗವಿಮಠದ ಸ್ವಾಮೀಜಿ, ವಿವಿಧ ಸಮುದಾಯಗಳ ಮುಖಂಡರು ಹಾಗೂ ವಿವಿಧ ಎನ್.ಜಿ.ಒ ಗಳ ಸಹಯೋಗದಲ್ಲಿ ಕೋವಿಡ್ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸದಸ್ಯರು ಅಭಿಯಾನಕ್ಕೆ ಚಾಲನೆ ಸಿಗುವವರೆಗೂ ಕಾಯದೇ ಕೂಡಲೇ ಈಗ ನೀಡಿರುವ ಸೂಚನೆಗಳನ್ನು ಅನುಸರಿಸಿ ಎಂದು ಅವರು ಹೇಳಿದರು.
ಸಂವಾದದಲ್ಲಿ ವಿವಿಧ ವಾರ್ಡುಗಳ ಸದಸ್ಯರು ಜಾಗೃತಿ ಕಾರ್ಯಕ್ರಮಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಂದ ಪಡೆದು, ವಾರ್ಡುಗಳ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಕೊಪ್ಪಳ ನಗರಸಭೆ ಪೌರಾಯುಕ್ತ ಮಂಜುನಾಥ ಸೇರಿದಂತೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು.

Please follow and like us:
error