ಕೋರೊನಾ ಸೋಂಕಿಗೆ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಸಾವು

ಚಾಮರಾಜನಗರ ; ಚಾಮರಾಜನಗರ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ರಾಚಯ್ಯ ಕೋರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.  ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ರಾಚಯ್ಯ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ಧಾರೆ. ಚಾಮರಾಜನಗರ ಜಿಲ್ಲೆಯಲ್ಲಿ 22 ವರ್ಷಗಳಿಂದ ಆಯುಷ್ ವೈಧ್ಯರಾಗಿ  ಸೇವೆ ಸಲ್ಲಿಸುತ್ತಿದ್ದ ಡಾ.ರಾಚಯ್ಯ ಪ್ರತಿ ನಿತ್ಯ ಮೈಸೂರಿನಿಂದ ಚಾಮರಾಜನಗರಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಕೋರೊನಾ ಪಾಸಿಟೀವ್ ಹಿನ್ನಲೆ  ಜುಲೈ 21 ರಂದು ಆರೋಗ್ಯ ಸಮಸ್ಯೆಯಿಂದ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದರು.

ಮೈಸೂರಿನ ಉದಯಗಿರಿ ನಿವಾಸಿಯಾದ ಡಾ.ರಾಚಯ್ಯ(60) ಕಳೆದ 22 ವರ್ಷಗಳಿಂದ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರೊನಾ ಉಲ್ಭಣಗೊಂಡ ನಂತರ ಮೈಸೂರಿನಿಂದ ಪ್ರತಿದಿನ ಕೆಲಸಕ್ಕೆ ಬಸ್ ನಲ್ಲಿ ಬರುತ್ತಿದ್ದುದೇ ಡಾ.ರಾಚಯ್ಯ ಅವರಿಗೆ ಸೋಂಕು ತಗುಲಲು ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಜು. 21 ರಂದು ಇಲಾಖೆ ನಡೆಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿಲು ಡಾ.ರಾಚಯ್ಯ ಅವರು ಮೈಸೂರಿನಿಂದ ಚಾಮರಾಜನಗರದ ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ಆರೋಗ್ಯ ಹದಗೆಟ್ಟಿರುವ ಬಗ್ಗೆ ಸಿಬ್ಬಂದಿಗಳಿಗೆ ಹೇಳಿಕೊಂಡಿದ್ದರು.  ಮಧುಮೇಹದಿಂದ ಬಳಲುತ್ತಿದ್ದ ಡಾ.ರಾಚಯ್ಯ ಜು.26ರಂದು ಕರೊನಾ ದೃಢಪಟ್ಟಿದೆ. ಚಿಕಿತ್ಸೆಗೆ ಸ್ಪಂದಿಸದೆ ಆ.2ರ ಬೆಳಗ್ಗೆ ಮೃತಪಟ್ಟರು. ಸೇವೆಯಿಂದ ನಿವೃತ್ತಿರಾದ ಕೊನೆಯ ದಿನವನ್ನು(ಜು.31) ಕರೊನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಕಳೆದು ಇಹಲೋಕ ತ್ಯಜಿಸಿದ್ದಾರೆ. ಇವರ ಪ್ರಾಥಮಿಕ. ಸಂಪರ್ಕದಲ್ಲಿದ್ದ ಇಲಾಖೆಯ ಇಬ್ಬರು ಸಿಬ್ಬಂದಿಗಳ ವರದಿ ನೆಗೆಟಿವ್ ಬಂದಿದೆ.

 

Please follow and like us:
error