ಕೋಮುವಾದ ಹರಡುವ ಅರ್ನಾಬ್ ಗೋಸ್ವಾಮಿಯನ್ನು ಜೈಲಿಗಟ್ಟಿ – ಪತ್ರೇಶ್ ಹಿರೇಮಠ್

ಕೋರೋನಾ ವೈರಸ್‍ಗಿಂತ ವೇಗವಾಗಿ ಕೋಮುವಾದ ಹರಡುವ ಅರ್ನಾಬ್ ಗೋಸ್ವಾಮಿಯನ್ನು ಜೈಲಿಗಟ್ಟಿ

ಹಗರಿಬೊಮ್ಮನಹಳ್ಳಿ; ಕೋರೋನಾ ವೈರಸ್‍ಗಿಂತಲೂ ವೇಗವಾಗಿ ಕೋಮುವಾದ ಹರಡುವ ಪತ್ರಕರ್ತ ವೇಷಧಾರಿ ಮತೀಯವಾದಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯನ್ನು ಜೈಲಿಗಟ್ಟಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾರಾಷ್ರದ ಫಾಲ್ಗರ್ ಸಾಧುಗಳ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕೈವಾಡ ಇದೆ ಎಂದು ಸುಳ್ಳು ಸುದ್ದಿಯನ್ನು ತನ್ನ ವಾಹಿನಿಯಲ್ಲಿ ಪ್ರಸಾರ ಮಾಡುವ ಮೂಲಕ ಪತ್ರಕರ್ತರ ಘನತೆ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜಿಗಿಟ್ಟ ಗೋಸ್ವಾಮಿ ಪತ್ರಕರ್ತರ ಹುದ್ದೆಗೆ ಕಪ್‍ಪುಚುಕ್ಕೆ ಎಂದರು ಈ ಹಿಂದೆ ಉಗುಳುವ, ಕೆಮ್ಮುವ, ತಟ್ಟೆ ನೆಕ್ಕುವ, ಹಣ್ಣಿಗೆ ಎಂಜಲು ಸವರುವ ಹಳೆಯ ವೀಡಿಯೋಗಳನ್ನು ತಿರುಚಿ ಮುಸ್ಲಿಂರು ಕರೋನಾ ವೈರಸ್ ಹರಡುತ್ತಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿ ಕ್ಷಮೆ ಕೋರಿ ಕೆಲವೇ ದಿನಗಳಲ್ಲಿ ಮತ್ತೆ ಸುಳ್ಳು ಸುದ್ದಿ ಪ್ರಸಾರ ಮಾಡಿ ಜನರಲ್ಲಿ ದ್ವೇಷ ಹಂಚುವ ಕುಕೃತ್ಯವನ್ನು ಅರ್ನಾಬ್ ತಮ್ಮ ಚಾನೆಲ್ ಮೂಲಕ ಮಾಡಿರುವುದು ಬಯಲಾಗುತ್ತಿದ್ದಂತೆ ಹೆದರಿ ಪೂರ್ವನಿಯೋಜಿತ ದಾಳಿ ಮಾಡಿಸಿಕೊಂಡಿದ್ದಾರೆ ಎಂದು ಪತ್ರೇಶ್ ಆರೋಪಿಸಿದರು ಪತ್ರಕರ್ತರ ಕೆಲಸ ಜವಾಬ್ದಾರಿಯುತ ಪವಿತ್ರ ಕಾರ್ಯವಾಗಿದ್ದು ವಸ್ತುನಿಷ್ಠ ವರದಿ ಮೂಲಕ ದೇಶದ ಜನರ ಪರ ಬರೆಯುವ ಮೂಲಕ ಮಾಸರಿಯಾಗಿರಬೇಕಾದ ಅರ್ನಾಬ್ ಪಕ್ಷಪಾತಿಯಾಗಿ ವರ್ತಿಸುತ್ತಿರುವ ಈತನ ಹಾಗೂ ಚಾನೆಲ್ ವಿರುದ್ಧ ಕೋಮುದ್ವೇಷ ಹಾಗೂ ದೇಶದಲ್ಲಿ ಗಲಭೆ ಸೃಷ್ಟಿಸುವ ಪ್ರಕರಣ ದಾಖಲಿಸಿ ಬುದ್ಧಿ ಕಲಿಸಬೇಕೆಂದು ಪತ್ರೇಶ್ ಆಗ್ರಹಿಸಿದರು.

Please follow and like us:
error