ಕೊರೋನ ಹಾವಳಿ: ಜೈಲುಗಳಿಂದ 70 ಸಾವಿರ ಕೈದಿಗಳ ಬಿಡುಗಡೆ

ಟೆಹರಾನ್,ಮಾ.10: ಕೊರೋನ ಹಾವಳಿ ನಿಯಂತ್ರಣ ಮೀರಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇರಾನಿನ ಸೆರೆಮನೆಗಳಲ್ಲಿರುವ 70 ಸಾವಿರಕ್ಕೂ ಅಧಿಕ ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಿರುವುದಾಗಿ ಇರಾನ್‌ನ ನ್ಯಾಯಾಂಗ ವರಿಷ್ಠ ಇಬ್ರಾಹೀಂ ರೈಸಿ ಸೋಮವಾರ ತಿಳಿಸಿದ್ದಾರೆ.

ಆದರೆ ನಿರ್ದಿಷ್ಟ ಅವಧಿಯ ಬಳಿಕ ಈ ಕೈದಿಗಳು ಜೈಲುಗಳಿಗೆ ಮರಳಬೇಕಾಗಿದೆಯೇ ಎಂಬ ಬಗ್ಗೆ ರೈಸಿ ಯಾವುದೇ ಮಾಹಿತಿಯನ್ನು ನೀಡಿಲ್ಲವೆಂದು ಇರಾನ್‌ನ ನ್ಯಾಯಾಂಗ ಕುರಿತ ಜಾಲತಾಣ ‘ಮಿಝಾನ್’ ತಿಳಿಸಿದೆ.

ಕೊರೋನ ಸೋಂಕು ಜೈಲುಗಳಲ್ಲಿ ಹರಡಿದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಯಿರುವುದರಿಂದ ಇರಾನ್ ಕೈದಿಗಳನ್ನು ಬಿಡುಗಡೆಗೊಳಿಸುವ ಕ್ರಮಕ್ಕೆ ಮುಂದಾಗಿದೆಯೆನ್ನಲಾಗಿದೆ.

Please follow and like us:
error