ಕೊರೋನ: ಸುಳ್ಳು ಮಾಹಿತಿ ಹಬ್ಬಿಸಿದ ಆರೋಪಿಯ ವಿರುದ್ಧ ಪ್ರಕರಣ

Kiev, Ukraine - October 17, 2012 - A logotype collection of well-known social media brand's printed on paper. Include Facebook, YouTube, Twitter, Google Plus, Instagram, Vimeo, Flickr, Myspace, Tumblr, Livejournal, Foursquare and more other logos.

ಗುವಾಹತಿ, ಮಾ.9: ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪುದಾರಿಗೆ ಎಳೆಯುವ ಮಾಹಿತಿ ಪ್ರಸರಿಸಿದ ಆರೋಪದಲ್ಲಿ ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಕಲಿಂಗ್ ದಿಯಾತ್ ನೀಡಿದ ದೂರಿನ ಮೇರೆಗೆ ಸುಬು ಕೆನಾ ತ್ಸೆರಿಂಗ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಾಸಿಘಾಟ್ ಪೊಲೀಸರು ಹೇಳಿದ್ದಾರೆ.

ಕೊರೋನ ಸೋಂಕು ಪಾಸಿಘಾಟ್‌ಗೂ ತಲುಪಿದ್ದು, ಉತ್ತರ ಅಸ್ಸಾಂನ ದಿಬ್ರೂಗಢ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ದಾಖಲಿಸಲಾಗಿದೆ ಎಂದು ಸುಬು ಸುಳ್ಳು ಮಾಹಿತಿ ಪೋಸ್ಟ್ ಮಾಡಿದ್ದರು ಎಂದು ಆಪಾದಿಸಲಾಗಿದೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ.

ಈ ಮಧ್ಯೆ ಕೊರೋನ ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ವಿದೇಶೀಯರಿಗೆ ನೀಡುತ್ತಿದ್ದ ಸಂರಕ್ಷಿತ ಪ್ರದೇಶ ಪರವಾನಿಗೆ(ಪಿಎಪಿ)ಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಕೂಡಾ ಅರುಣಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ. ಚೀನಾ ಜತೆಗೆ ಗಡಿ ಹಂಚಿಕೊಂಡಿರುವ ಈ ರಾಜ್ಯವನ್ನು ಪ್ರವೇಶಿಸಲು ವಿದೇಶಿಯರಿಗೆ ಪಿಎಪಿ ಅಗತ್ಯ.

Please follow and like us:
error