ಕೊರೋನ ವೈರಸ್‌ಗೆ ಭಾರತದಲ್ಲಿ ಆರನೇ ಬಲಿ

ಮುಂಬೈ,ಮಾ.22: ಮುಂಬೈನಲ್ಲಿ ಕೊರೋನ ಸೋಂಕಿತ 56 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಭಾರತದಲ್ಲಿ ಮಾರಣಾಂತಿಕ ಕೊರೋನ ವೈರಸ್‌ಗೆ ಆರನೇ ಬಲಿಯಾಗಿದೆ.

ಮಹಾರಾಷ್ಟ್ರದಲ್ಲಿ ಎರಡನೇ ವ್ಯಕ್ತಿ ಕೊರೋನಗೆ ಬಲಿಯಾಗಿದ್ದಾರೆ.

ಇದೇ ವೇಳೆ, ಭಾರತದಲ್ಲಿ ಕೊರೋನ ವೈರಸ್ ಸೋಂಕು ಪೀಡಿತರ ಸಂಖ್ಯೆ 324ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಈ ಪೈಕಿ 23 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದಿದೆ.

Please follow and like us:
error