ಕೊರೋನ ಲಕ್ಷಣಗಳಿಲ್ಲದ ವಲಸಿಗ ಕಾರ್ಮಿಕರಿಗೆ ತವರು ರಾಜ್ಯಗಳಿಗೆ ಮರಳಲು ಅನುಮತಿ

ನವದೆಹಲಿ : ಕೊರೋನವೈರಸ್ ಲಕ್ಷಣಗಳನ್ನು ಹೊಂದಿರದ ವಲಸಿಗ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳಬಹುದು ಎಂದು ಕೇಂದ್ರ ಸರಕಾರ ಇಂದು ಹೇಳಿದ್ದು ಈ ನಿಟ್ಟಿನಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಎರಡನೇ ಹಂತದ ಲಾಕ್ ಡೌನ್ ಅಂತ್ಯಗೊಳ್ಳಲು ಇನ್ನೇನು ಒಂದು ವಾರ ಇದೆಯೆನ್ನುವಾಗ ಈ ಕ್ರಮ ಕೈಗೊಳ್ಳಲಾಗಿದೆ.

ವಲಸಿಗ ಕಾರ್ಮಿಕರು ವಾಪಸಾಗಲು ಅಗತ್ಯ ನಿಯಮಗಳನ್ನು ರೂಪಿಸಲು ನೋಡಲ್ ಸಂಸ್ಥೆಗಳನ್ನು ನೇಮಿಸುವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ತಮ್ಮ ತವರು ರಾಜ್ಯಗಳಿಗೆ ವಾಪಸಾಗಲಿಚ್ಛಿಸುವ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಗುವುದು, ಯಾರಲ್ಲಿ ಕೊರೋನ ಲಕ್ಷಣಗಳಿಲ್ಲವೋ ಅವರಿಗೆ ತೆರಳಲು ಅನುಮತಿ ನೀಡಲಾಗುವುದು ಎಂದು ಗೃಹ ಸಚಿವಾಲಯದ ಆದೇಶ ತಿಳಿಸಿದೆ.

Please follow and like us:
error