ಕೊರೋನ್ನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ ದಿನ

Kannadanet NEWS  ೬೭ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕೊರೋನ್ನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ ದಿನವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಹಾಗೂ ಸಹಕಾರ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

ಕಾರ್ಯಕ್ರಮದಲ್ಲಿ ಸಹಕಾರ ಧ್ವಜಾರೋಹಣವನ್ನು ಜಿಲ್ಲಾ ಯೂನಿಯನ್ನಿನ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ ನೆರವೇರಿಸಿ ನಂತರ ಜರುಗಿದ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಡಾ. ಶೇಖರಗೌಡ ಮಾಲಿಪಾಟೀಲ ರವರು ವಹಿಸಿದ್ದರು. ಅವರು ತಮ್ಮ ಉದ್ಘಾಟನಾ ಬಾಷಣದಲ್ಲಿ ನವ್ಹೆಂಬರ್ ೧೪ ರಿಂದ ೨೦ ರವರೆಗೆ ೭ ದಿನಗಳ ಕಾಲ ಸಹಕಾರ ಸಪ್ತಾಹವನ್ನು ರಾಷ್ಟ್ರಾಧ್ಯಂತಹ ಆಚರಿಸಲಾಗುತ್ತಿದೆ. ಪ್ರತಿಯೊಂದು ಸಹಕಾರ ಸಂಘಗಳು ಈ ಸಂದರ್ಭದಲ್ಲಿ ಇಲ್ಲಿಯವರೆಗೂ ಮಾಡಿರುವ ಸಾಧನೆಯನ್ನು ಪರಾಮರ್ಶ ಮಾಡಿಕೊಂಡು ನಿರ್ಧಿಷ್ಠ ಗುರಿಗಳನ್ನು ಹಾಕಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಈ ಕೋರೋನಾ ಸಮಯದಲ್ಲಿ ಸಹಕಾರ ಸಂಘಗಳು ಬಹಳ ಸಂಕಷ್ಟವನ್ನು ಎದುರುಸಿವೆ, ಈ ನಿಟ್ಟಿನಲ್ಲಿ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೋಯ್ಯಲು ಕರೆನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ಮಾರುತಿ ಅಂಗಡಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಶರಣಬಸಪ್ಪ ಕಾಟ್ರಳ್ಳಿ, ಶ್ರೀಮತಿ ರಾಜ್ಮಾ, ರಾಜಶೇಖರ ಹೊಸಮನಿ, ಗವಿಸಿದ್ದಯ್ಯ ಹಿರೇಮಠ, ಮಲಯ್ಯ ಎಚ್. ಹನುಮೇಶ ಲೈನದ್ ಇವರುಗಳು ಉಪಸ್ಥಿತರಿದ್ದರು.

Please follow and like us:
error