ಕೊರೋನಾ ಹೆಸರಿನಲ್ಲಿ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಕೊಪ್ಪಳ: ಕೊರೋನಾ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರಕಾರ ನಡೆಸಿದೆ ಎನ್ನಲಾಗಿರುವ  ಭ್ರಷ್ಟಾಚಾರ ವಿರೋಧಿಸಿ ಉತ್ತರಕೊಡಿ, ಲೆಕ್ಕ ಕೊಡಿ ಎಂಬ ಹೆಸರಿನಲ್ಲಿ ಕೊಪ್ಪಳದ ಅಶೋಕ‌ ವೃತ್ತದಲ್ಲಿ ಶನಿವಾರ ಮಾಜಿ ಸಚಿವರಾದ ಯು.ಟಿ.ಖಾದರ್, ಶಿವರಾಜ ತಂಗಡಗಿ ಹಾಗೂ ಮಾಜಿ ಸಚಿವೆ ಉಮಾಶ್ರೀ ನೇತೇತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೊರೊನಾ ಮುಂದಿಟ್ಟುಕೊಂಡು ಸರಕಾರ ಹಗರಣ ಮಾಡ್ತಿದೆ. ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಶ್ವೇತಪತ್ರ ಹೊರಡಿಸಬೇಕು. ಈಗ ಸಾಂಕೇತಿಕವಾಗಿ  ಪ್ರತಿಭಟನೆ ಮಾಡಿದ್ದೇವೆ. ಲೆಕ್ಕ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕು ಮಟ್ಟದಲ್ಲೂ ಪ್ರತಿಭಟನೆ ಮಾಡಲಿದ್ದೇವೆ ಎಂದು ಮಾಜಿ ಸಚಿವೆ ಉಮಾಶ್ರೀ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಉಮಾಶ್ರೀ, ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ,ಅಸೀಪ್ ಅಲಿ, ಹಸನಸಾಬ ದೋಟಿಹಾಳ, ಜಿ.ಪಂ. ಸದಸ್ಯರಾದ ರಾಜಶೇಖರ ಹಿಟ್ನಾಳ, ಕಾಟನ್ ಪಾಷಾ, ಮಾನ್ವಿ ಪಾಷಾ, ಸಲಿಂ ಅಳವಂಡಿ, ಕೃಷ್ಣ ಇಟ್ಟಂಗಿ,ರಮೇಶ ನಾಯಕ , ಶಾಮಿದ್ ಮನಿಯಾರ್, ಮಾಲತಿ ನಾಯಕ್ , ಶೈಲಜಾ ಹೆಚ್.ಎಂ., ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗಿ

 

https://www.facebook.com/kannadanet/videos/639697773566742/

Please follow and like us:
error