ಕೊರೋನಾ ವೈರಸ್ ಮನುಷ್ಯನ ಸ್ವಾರ್ಥ, ಕ್ರೌರ್ಯವನ್ನು ಹೇಗೆ ಹೊರ ಹಾಕುತ್ತಿದೆ ನೋಡಿ!

ನನಗೆ ನಾನೇ ನಿನಗೆ ನೀನೇ! –

ಕೊರೋನಾ ವೈರಸ್ ಮನುಷ್ಯನ ಸ್ವಾರ್ಥ, ಕ್ರೌರ್ಯವನ್ನು ಹೇಗೆ ಹೊರ ಹಾಕುತ್ತಿದೆ ನೋಡಿ! ಈ ವೈರಸ್ ಎಲ್ಲರಿಗಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿರುವುದು ವಯಸ್ಸಾದ ಹಿರಿಯ ಜೀವಗಳಿಗೆ. ಮೊದಲೇ ದುರ್ಬಲವಾದ ಶರೀರಕ್ಕೆ ಇದರ ದಾಳಿ ಪ್ರಾಣಾಂತಿಕವಾಗುತ್ತದೆ. ವೈರಸ್ ಸೋಂಕು ತಗಲಿ ಈವರೆಗೆ ಸತ್ತವರಲ್ಲಿ ಮುಕ್ಕಾಲು ಪ್ರಮಾಣಕ್ಕೂ ಹೆಚ್ಚು ಇಂತಹ ಹಿರಿಯ ಜೀವಗಳೇ. ಇವರುಗಳು ವೈರಸ್ ಸೋಂಕು ತಗಲಿ ಆಸ್ಪತ್ರೆ ಸೇರಿದರೆ ವಾಪಾಸ್ಸು ಬರುತ್ತೇನೆಂಬ ಬರವಸೆ ಇಲ್ಲ. ಹಾಗಿದ್ದೂ ಎಂಭತ್ತು, ತೊಂಭತ್ತರ ಪ್ರಾಯವನ್ನು ಮೀರಿದ ಹಿರಿಯ ಜೀವಗಳು ವೈರಸನ್ನು ಗೆದ್ದು ಬಂದ ಉದಾಹರಣೆಗಳೂ ಇವೆ. ಆದರೆ, ವೈರಸನ್ನು ಗೆದ್ದ ಇಂತಹ ಎಷ್ಟೋ ಹಿರಿಯ ಜೀವಗಳು ಅವರ ಕರುಳು ಕುಡಿಗಳೇ ವಾಪಾಸು ಮನೆಗೆ ಸೇರಿಸಿಕೊಳ್ಳಲು ಒಪ್ಪದೆ ಸೋಂಕಿಗಿಂತಲೂ ಹೆಚ್ಚಿನ ಮಾನಸಿಕ ಹೊಡೆತವನ್ನು ಅನುಭವಿಸುತ್ತಿವೆ.

73 ವರ್ಷ ಪ್ರಾಯದ ಪಶ್ಚಿಮ ದೆಹಲಿಯ ಈ ಹಿರಿಯ ಜೀವಕ್ಕೆ ಜೂನ್ 22 ರಂದು ಕೊರೋನಾ ಸೋಂಕು ತಗಲಿ, ಗಂಭೀರ ಸ್ಥಿತಿ ತಲುಪಿದಾಗ ಅವರ ಮಕ್ಕಳು ಜೂ 26 ರಂದು ಅವರನ್ನು ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಿದರು. ಒಂದೇ ವಾರದಲ್ಲಿ ಅವರು ಚೇತರಿಸಿಕೊಂಡು ವೈರಸನ್ನು ಮಣಿಸಿ ಗುಣಮಖರಾದರು. ಅವರು ಸಂಪೂರ್ಣವಾಗಿ ವಾಸಿಯಾದ ನಂತರ ಡಾಕ್ಟರು ಅವರ ಮಕ್ಕಳಿಗೆ ಫೋನ್ ಮಾಡಿ ತಂದೆಯನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದರು. ಆದರೆ, ಮಕ್ಕಳು ಅವರಿಂದ ತಮಗೆ ಸೋಂಕು ಹರಡಬಹುದು ಎಂದು ಭಯ ವ್ಯಕ್ತ ಪಡಿಸಿ ಅವರನ್ನು ಬೇರೆಲ್ಲಾದರೂ ಕಳಿಸಿ ಎಂದರು! ಡಾಕ್ಟರು ಅವರೀಗ ಸಂಪೂರ್ಣ ಗುಣ ಹೊಂದಿರುವುದರಿಂದ ಅವರನ್ನು ಪ್ರತ್ಯೇಕವಾಗಿರಿಸುವ ಅಗತ್ಯವೂ ಇಲ್ಲ, ಅವರಿಂದ ಯಾರಿಗೂ ಸೋಂಕು ಹರಡುವುದೂ ಇಲ್ಲ ಎಂದು ಎಷ್ಟೇ ಹೇಳಿದರೂ ಇಬ್ಬರು ಗಂಡು ಮಕ್ಕಳು ‘ನೀನು ಕರೆದುಕೊಂಡು ಹೋಗು, ನೀನು ಕರೆದುಕೊಂಡು ಹೋಗು’ ಎನ್ನುತ್ತ ಕೊನೆಗೆ ಯಾರೂ ಕರೆದುಕೊಂಡು ಹೋಗದೆ, ಮಾನಸಿಕವಾಗಿ ಕುಗ್ಗಿ ಹೋದ ಆ ಹಿರಿಯ ಜೀವ ಆಸ್ಪತ್ರೆಯಲೇ ಉಳಿಯಬೇಕಾಯಿತು. ಡಾಕ್ಟರು ಪೋಲಿಸರಿಗೆ ವಿಷಯ ತಿಳಿಸಿ ಮಕ್ಕಳ ವಿಳಾಸವನ್ನು ಅವರಿಗೆ ನೀಡಿದರು.

ದೆಹಲಿಯ ಇನ್ನೊಂದು ಆಸ್ಪತ್ರೆಯಲ್ಲಿ 63 ವರ್ಷದ ಹಿರಿಯ ಜೀವವೊಂದು ಸೋಂಕಿಗೆ ಬಲಿಯಾದಾಗ ಅವರ ಮಕ್ಕಳು ಶವವನ್ನು ಪಡೆಯಲು ಹಿಂಜರಿದು ಹಣ ಕೊಡುತ್ತೇವೆ ನೀವೇ ಅಂತ್ಯ ಸಂಸ್ಕಾರ ನಡೆಸಿ ಎಂದು ಆಸ್ಪತ್ರೆಯವರಿಗೆ ಹೇಳಿದ ಉದಾಹರಣೆ ಇದೆ. ಹಿರಿಯರು ಆಸ್ಪತ್ರೆಯಲ್ಲಿ ವೈರಸಿನೊಡನೆ ಸೆಣಸುತ್ತಿರುವಾಗ ಅವರ ಕುಟುಂಬಿಕರು ಫೋನೂ ಕೂಡಾ ಮಾಡದ ಎಷ್ಟೋ ಉದಾಹರಣೆಗಳಿವೆ ಎಂದು ಡಾಕ್ಟರು, ನರ್ಸುಗಳು ಹೇಳುತ್ತಾರೆ

Please follow and like us:
error