ಕೊರೋನಾ ಬಗ್ಗೆ ಆತಂಕ ಬೇಡ ಮುಂಜಾಗ್ರತೆ ಇರಲಿ

ನೋವೆಲ್ ಕೊರೊನಾ ವೈರಸ್ (ಕೋವಿಡ್-19) ಇಡೀ ಜಗತ್ತಿಗೆ ವ್ಯಾಪಿಸಿದ್ದು, ಇದು ಒಂದು ಮಾರಕ ಕಾಯಿಲೆಯಾಗಿ ಹರಡುತ್ತಿದ್ದು, ಇದರಿಂದ ವಿಶ್ವದ ಜನ-ಜೀವನ ಮತ್ತು ಆರ್ಥಿಕತೆಯನ್ನು ದುರ್ಬಲವಾಗಿಸಿದೆ.  ಕೋವಿಡ್-19 ಮೊದಲಿಗೆ ಚೀನಾ ದೇಶದಲ್ಲಿ ಕಂಡು ಬಂದು, ನಂತರ ವಿಶ್ವದ ಇತರೆ ರಾಷ್ಟçಗಳಿಗೆ ವ್ಯಾಪಕವಾಗಿ ಹಬ್ಬಿದ್ದು, ಇದಕ್ಕೆ ಭಾರತವು ಸಹ ಹೊರತಾಗಿಲ್ಲ.
ಕೋವಿಡ್-19 ಸೊಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ನಾವು ರಕ್ಷಣೆ ಪಡೆಯಲು ನಮ್ಮ ಸುರಕ್ಷತೆಗೆ ಆಧ್ಯತೆ ನೀಡಬೇಕಾಗಿದೆ.  ವ್ಯಕ್ತಿ, ವ್ಯಕ್ತಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳವುದು, ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಬೂನಿನಿಂದ ಆಗಾಗ ಶುಚಿಯಾಗಿ ಕೈಗಳನ್ನು ತೊಳೆದುಕೊಳ್ಳವುದು ಹಾಗೂ ಸ್ಯಾನಿಟೈಜರ್ ಉಪಯೋಗ ಮಾಡಬೇಕಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ರೋಗದ ನಿರ್ಮೂಲನೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕಾಲ ಕಾಲಕ್ಕೆ ತೆಗೆದುಕೊಳ್ಳುತ್ತಿದ್ದು, ಸರ್ಕಾರವು ನಿಡುವ ನಿರ್ದೇಶನಗಳನ್ನು ಸಾರ್ವಜನಿಕರು ತಪ್ಪದೆ ಪಾಲಿಸಿವುದು ಅವಶ್ಯಕವಾಗಿದ್ದು, ಇದರ ನಿರ್ಮೂಲನೆಗೆ ಸರ್ಕಾರ ಮಾತ್ರವಲ್ಲದೇ ಸಾರ್ವಜನಿಕರ ಪಾತ್ರವು ಬಹುಮುಖ್ಯವಾಗಿದೆ.
ಕೊಪ್ಪಳ ಜಿಲ್ಲೆ ಆರಂಭದಲ್ಲಿ ಹಸಿರುವಲಯ ಎಂದು ಗುರುತಿಸಿಕೊಂಡಿತ್ತು.  ಆದರೆ ಈಗ ಕೊರೋನಾ ಸಂಖ್ಯೆ ನೂರರ ಗಡಿ ದಾಟಿದ್ದು, ಅದರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ.  ಸುದೈವ ಎನ್ನುವಂತೆ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬರುತ್ತಿರುತ್ತಿದ್ದಾರೆ.  ಈ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಔಷಧಿಯನ್ನು ಕಂಡು ಹಿಡಿಯದೆ ಇರುವುದರಿಂದ, ಪ್ರತಿಯೊಬ್ಬರು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಆದ್ದರಿಂದ ನಾವು ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಮಾಸಲೆಯುಕ್ತ ಅಂಶ ಹೆಚ್ಚಾಗಿರಬೇಕು.  ನೀರನ್ನು ಕಾಯಿಸಿ ಕುಡಿಯುವುದು ಮತ್ತು ಆಯುಷ್ ಇಲಾಖೆ ಹಾಗೂ ನಮ್ಮ ದೇಶಿಯ ವೈದ್ಯ ಪದ್ಧತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲವಾರು ಕ್ರಮಗಳಿದ್ದು, ಅವುಗಳನ್ನು ನಾವೆಲ್ಲರೂ ತಪ್ಪದೆ ಪಾಲಿಸಬೇಕು.
ನೋವೆಲ್ ಕೊರೋನಾ ವೈರಸ್‌ನ ಗುಣಲಕ್ಷಣಗಳಾದ ಕೆಮ್ಮು, ಶೀತ, ಜ್ವರ ಮತ್ತು ಇತರೆ ಲಕ್ಷಣಗಳು ಕಂಡು ಬಂದ ತಕ್ಷಣ ಜನರು ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ತೆರಳಿ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು.  ಯಾರು ಭಯ ಭೀತರಾಗುವ ಅವಶ್ಯಕತೆಯಿಲ್ಲ, ಹಾಗೇನಾದರೂ ಭಯ ಭೀತಿಯಿಂದ ಮನೆಯಲ್ಲಿ ಕುಳಿತಿದ್ದೆ ಆದರೆ ಅದು ನಿಮಗೆ ಮಾತ್ರವಲ್ಲ, ನಿಮ್ಮ ಇಡೀ ಕುಟಂಬಕ್ಕೂ ಸಹ ಹರಡುವ ಸಾಧ್ಯತೆ ಇರುತ್ತದೆ. ಕೆಮ್ಮು, ಶೀತ, ಜ್ವರ ಇರುವವರೆಲ್ಲರನ್ನೂ ಕೊರೋನಾ ಸೊಂಕಿತರೆAದು ಹೇಳಲಾಗದು, ಹಾಗಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳವುದು ಒಳ್ಳೆಯದು.
ಸರ್ಕಾರದ ನಿರ್ದೇಶನಗಳಂತೆ 5ಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 10 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರು, ಯಾವುದೇ ರೋಗವನ್ನು ಹೊಂದಿರುವ ವ್ಯಕ್ತಿಗಳು, ಆರೋಗ್ಯದಂತಹ ಅವಶ್ಯಕ ಕಾರಣಗಳಿಲ್ಲದೆ ಹೊರಗಡೆ ಹೊಗುವಂತಿಲ್ಲ. ಕಡ್ಡಾಯವಾಗಿ ಅವರು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ.
ಈಗಾಗಲೇ ಕೊಪ್ಪಳ ಜಿಲ್ಲೆಯಾದ್ಯಾಂತ ಸಿನಿಮಾ ಮಂದಿರಗಳು, ನಾಟಕ, ರಂಗಮAದಿರಗಳು, ವಸ್ತು ಪ್ರದರ್ಶನ, ಟ್ಯೂಷನ್ ತರಗತಿಗಳು, ಸಂಗೀತ ಕಾರ್ಯಕ್ರಮಗಳು, ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡುವ ಕ್ರೀಡೆಗಳಾದ ಕ್ರಿಕೆಟ್, ಫುಟ್‌ಬಾಲ್, ಭಾಸ್ಕಟ್‌ಬಾಲ್, ಹಾಕಿ ಮತ್ತು ಇತರೆ ಗುಂಪುಗಾರಿಕೆಯಾಗಿ ಸೇರುವ ಕಾರ್ಯಕ್ರಮ ಮತ್ತು ಕ್ರೀಡಾಕೂಟಗಳನ್ನು ನಿಷೇಧಿಸಲಾಗಿದೆ.  ಮದುವೆ ಸಮಾಂರAಭಗಳಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಎಲ್ಲಾ ಧರ್ಮಗಳ ಪ್ರಾರ್ಥನೆ ಮತ್ತು ಹಬ್ಬಗಳನ್ನು ಎಲ್ಲರೂ ಸೇರಿ ಮಾಡುವಂತಿಲ್ಲ. ವಿದೇಶದಿಂದ ಬಂದವರೆಲ್ಲ ಕಡ್ಡಾಯವಾಗಿ ಹೋಮ ಕ್ವಾರಂಟೈನ್ ಇರಬೇಕು.  ಶವ ಸಂಸ್ಕಾರ ಸಂದರ್ಭದಲ್ಲಿ 20ಕ್ಕಿಂತ ಹೆಚ್ಚು ಜನರು ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ.
ಆಯುಷ್ ಇಲಾಖೆಯು ಆಹಾರ ಸೇವನೆ ಕ್ರಮಗಳನ್ನು ನೀಡಿದ್ದು, ಕೇವಲ ಹಸಿದಾಗ ಮಾತ್ರ ಆಹಾರ ಸೇವನೆ ಮಾಡಬೇಕು.  ತಾಜ ಮತ್ತು ಶುಚಿಯಾದ ಆಹಾರ ಸೇವನೆ ಉತ್ತಮ. ಆಹಾರ ಸೇವನೆ ಮಾಡುವ ಸ್ಥಳ ಶುಚಿಯಾಗಿರುವುದರ  ಜೊತೆಗೆ ನಿಶಬ್ದವಾಗಿರಬೇಕು.  ಅತಿ ನಿಧಾನವಾಗಿ ಅಥವಾ ಅವಸರವಾಗಿ ಆಹಾರ ಸೇವನೆ ಒಳ್ಳೆಯದಲ್ಲ.  ಸೇವಿಸುವ ಆಹಾರ ಗಟ್ಟಿಯಾಗಿದ್ದರೆ, ಸೇವನೆಯ ಮಧ್ಯೆ ನೀರು ಕುಡಿಯಬೇಕು.
ಆಹಾರ ಸೇವನೆ ಮಾಡುವಾಗ ಹೆಚ್ಚಾಗಿ ಮಾತನಾಡುವುದು ಸೂಕ್ತವಲ್ಲ. ಊಟಕ್ಕಿಂತ ಮೊದಲು ಒಂದು ಗುಟುಕು ನೀರು ಕುಡಿಯಬೇಕು. ನಿಯಮಿತ ವೇಳೆಯಲ್ಲಿ ಆಹಾರ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ತನ್ಮತೆಯಿಂದ ಆಹಾರವನ್ನು ಸೇವಿಸಿ, ಆದರೆ ಮೇಲಿಂದ ಮೇಲೆ ಅಥವಾ ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಸೇವಿಸುವುದು ಮಾಡಬಾರದು.  ಬಹಳ ಸಮಯದವರೆಗೆ ಉಪವಾಸವಿರುವುದು ಹಿತಕರವಲ್ಲ. ಪುನಃ ಪುನಃ ಬಿಸಿ ಮಾಡಿ ಮತ್ತು  ಹಳಸಿದ, ಅತಿಯಾಗಿ ಶೀತಲೀಕರಿಸಿದ ಆಹಾರ ಅಥವಾ ಪಾನಿಯಗಳನ್ನು ಸೇವಿಸಬಾರದು.  ಆಹಾರ ಸೇವಿಸುವುದಕ್ಕೆ ಮೊದಲು ಮತ್ತು ಮಧ್ಯೆ ಹೆಚ್ಚು ನೀರು ಕುಡಿಯಬಾರದು. ಮಾನಸಿಕ, ಭಾವನಾತ್ಮಕ ಮತ್ತು ಉದ್ರಿಕ್ತ ಸಮಯದಲ್ಲಿ ಆಹಾರ ಸೇವಿಸಬಾರದು ಊಟದಲ್ಲಿ, ಉಪ್ಪು, ಹುಳಿ, ಖಾರ, ಮಸಾಲೆ ಪದಾರ್ಥಗಳನ್ನು ಮಿತಿಯಾಗಿ ಉಪಯೋಗಿಸುವುದರ ಜೊತೆಗೆ ಆದಷ್ಟು ಸಹಜ ಮತ್ತು ತಾಜಾ ಆಹಾರ ಸೇವನೆ ಅತ್ಯಗತ್ಯ.
ಕೊರೋನಾ ಎಂಬ ಸಾಂಕ್ರಾಮಿಕ ರೋಗದ ನಿಯಮತ್ರಣಕ್ಕಾಗಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಆರೋಗ್ಯ, ಪೊಲೀಸ್ ಮತ್ತು ಇತರೆ ಇಲಾಖೆಗಳು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದು, ಅವರಿಗೆ ಸಾರ್ವಜನಿಕರು ಸಹಕಾರ ನೀಡುವುದರ ಜೊತೆಗೆ ಕಾಲ-ಕಾಲಕ್ಕೆ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ನಾವೆಲ್ಲರೂ ಪಾಲನೆ ಮಾಡುವುದರ ಮೂಲಕ ಕೊರೋನಾ ಎಂಬ ಹೆಮ್ಮಾರಿಯನ್ನು ನಿರ್ಮೂಲನೆ ಮಾಡೋಣ.

ಜಿ. ಸುರೇಶ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

Please follow and like us:
error