ಕೊಪ್ಪಳ; ಶೇ.82.16ರಷ್ಟು ಮತದಾನ

ಮೊದಲ ಹಂತದ ಗ್ರಾಪಂ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 82.16ರಷ್ಟು‌ ಮತದಾನ ದಾಖಲಾಗಿದೆ.

ಸಂಜೆ 7ರವರೆಗೆ ಕೊಪ್ಪಳ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 83.26, ಯಲಬುರ್ಗಾ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 81.41 ಹಾಗೂ ಕುಕನೂರು‌ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 79.89ರಷ್ಟು ಮತದಾನವಾಗಿದೆ.

ಒಟ್ಟಾರೆ ಕೊಪ್ಪಳ ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು‌ ತಾಲೂಕುಗಳ 73 ಗ್ರಾಪಂಗಳಲ್ಲಿ ಶೇಕಡಾ 82.16ರಷ್ಟು ಮತದಾನ ದಾಖಲಾಗಿದೆ.

Please follow and like us:
error