ಗುಡುಗು ಮಿಂಚಿನೊಂದಿಗೆ ಜಿಲ್ಲೆಯಾದ್ಯಂತ ಭರ್ಜರಿ ಮಳೆ : ಸಿಡಿಲಿಗೆ ಬಾಲಕಿ ಸಾವು

ಕನ್ನಡನೆಟ್ ನ್ಯೂಸ್, ಕೊಪ್ಪಳ
ರಾಜ್ಯ ‌ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕೊಪ್ಪಳ ಜಿಲ್ಲಾದ್ಯಂತ ಸೋಮವಾರ ತಡರಾತ್ರಿಯಿಂದ ಮಳೆರಾಯನ ಅಬ್ಬರ ಆರಂಭವಾಗಿದೆ. ಮಂಗಳವಾರ(ಅ.20)ವೂ ಗುಡುಗು- ಸಿಡಿಲು ಸಹಿತ ಮಳೆಯಾಗಿದ್ದು, ಒಬ್ಬ ಬಾಲಕಿ ಮೃತಪಟ್ಟಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 2 ಕುರಿ ಸತ್ತಿವೆ.ಯಲಬುರ್ಗಾ ತಾಲೂಕು ಗೆದಗೇರಿ ತಾಂಡಾದ ರೂಪಾ ಚೌವ್ಹಾಣ(14) ಸಿಡಿಲು ಬಡಿದು ಮೃತಪಟ್ಟಿದ್ದಾಳೆ. 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದಾಗ ಸಿಡಿಲು‌ ಬಡಿದಿದೆ.
ಯಲಬುರ್ಗಾ ತಾಲೂಕು ಸಾಲಬಾವಿ ಗ್ರಾಮದಲ್ಲಿ 2 ಕುರಿ ‌ಸತ್ತಿವೆ. ಗ್ರಾಮದ‌ ಶಂಕರಗೌಡ ಮಾಲೀ ಪಾಟೀಲ್ ಎಂಬುವರಿಗೆ ಸೇರಿದ ಕುರಿಮರಿ ಸತ್ತಿದ್ದು, ಕುರಿಗಾಯಿಗಳಿಗೆ ಗಾಯಗಳಾಗಿವೆ. ಸುಮಾರು‌ 30 ಸಾವಿರ ರೂಪಾಯಿ ನಷ್ಟ‌ ಅಂದಾಜಿಸಲಾಗಿದೆ.‌ ಯಲಬುರ್ಗಾ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error