ಕೊಪ್ಪಳ ಬಿಜೆಪಿ ಟಿಕೇಟ್ ಫೈನಲ್ !

ಕೊಪ್ಪಳ : ಕೊಪ್ಪಳ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೇಟ್ ಹಾಲಿ ಸಂಸದ ಸಂಗಣ್ಣ ಕರಡಿಗೆ ಫೈನಲ್ಲಾಗಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಟಿಕೇಟ್ ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವೈ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಾಲಿ ಸಂಸದ ಕರಡಿ‌ ಸಂಗಣ್ಣನನವರಿಗೆ ಮತ್ತೊಮ್ಮೆ ಟಿಕೆಟ್. ದೊರೆತಿದ್ದು ಟಿಕೆಟ್ ರೇಸ್ ನಲ್ಲಿ ಹಲವಾರು ಮುಖಂಡರ ಹೆಸರುಗಳು ಕೇಳಿ ಬರುತ್ತಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಕರಡಿ ಸಂಗಣ್ಣ . ಟಿಕೇಟ್ ಫೈನಲ್ ಆದ ಬಗ್ಗೆ ಮಾಹಿತಿ ಇಲ್ಲ. ೧೬ ಅಥವಾ ೧೭ ರಂದು ಅಧಿಕೃತ ವಾಗಿ ಟಿಕೇಟ್ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು. ಆದರೆ ಆಪ್ತವಲಯದಲ್ಲಿ ಈಗಾಗಲೇ ಸಿದ್ದತೆಗಳು ಆರಂಭಗೊಂಡಿವೆ.