ಕೊಪ್ಪಳ ನಗರಸಭೆಯ ಪೌರಾಯುಕ್ತರಾಗಿ ರಮೇಶ ಬಡಿಗೇರ್ ಅಧಿಕಾರ ಸ್ವೀಕಾರ

.

ಕನ್ನಡನೆಟ್ ನ್ಯೂಸ್ : ಕೊಪ್ಪಳ ನಗರಸಭೆಗೆ ಪೌರಯುಕ್ತರಾಗಿ ವರ್ಗಾವಣೆ ಆಗಿ ಬಂದಿರುವ ರಮೇಶ ಬಡಿಗೇರ್ ಅವರು ಅಧಿಕಾರ ಸ್ವೀಕರಿಸಿದರು. ನಗರಸಭೆ ಕಚೇರಿಯಲ್ಲಿ ಕಡತಗಳಿಗೆ ಸಹಿ ಮಾಡುವ ಅಧಿಕಾರ ಸ್ವೀಕರಿಸಿದ ಅವರು, ಕರೋನಾದ ಇಂತಹ ಸಂದರ್ಭದಲ್ಲಿ ಜನರ ನಗರಸಭೆ ಅಧ್ಯಕ್ಷರ ಹಾಗೂ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಗರಸಭೆಯ ವ್ಯಾಪ್ತಿಯ ಎಲ್ಲಾ ಜನರ ಆರೋಗ್ಯದ ಜೊತೆ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಲತಾ ಗವಿಸಿದ್ದಪ್ಪ ಚಿನ್ನೂರ್, ಉಪಾಧ್ಯಕ್ಷರಾದ ಜರೀನಾ ಬೇಗಮ್ ಅರಗಂಜಿ, ಸೈಯದ್ ಮಹ್ಮದ್ ಹುಸೇನಿ ( ಚೋಟು) ಅಜೀಂ ಅತ್ತಾರ ಸೇರಿದಂತೆ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Please follow and like us:
error