ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ, ಉತ್ಸಾಹದಿಂದ ಭಾಗವಹಿಸಿದ ಮತದಾರ ಪ್ರಭು

ಕೊಪ್ಪಳ ಏ. : ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಮೂರನೇ ಹಂತದಲ್ಲಿ
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್. 23 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದ್ದು ಜಿಲ್ಲೆಯಾದ್ಯಂತ ಬಹುತೇಕ
ಶಾಂತಯುತ ಮತದಾನ ನಡೆದಿದೆ. ಮತದಾರರು ಉತ್ಸಾಹದಿಂದಲೇ ಮತದಾನ
ಮಾಡಿರುವುದು ಈ ಭಾರಿಯ ಚುನಾವಣೆಯ ವಿಶೇಷವಾಗಿದೆ. ಸಂಜೆ 5
ಗಂಟೆಯವರೆಗೆ ಶೇ 60.66 ರಷ್ಟು ಮತದಾನವಾಗಿದ್ದು 2014 ರ
ಚುನಾವಣೆಯಲ್ಲಿ ಶೇ 65.60 ರಷ್ಟು ಮತದಾನವಾಗಿದ್ದು ಅಂತಿಮ ಮತದಾನದ
ವಿವರ ಇನ್ನೂ ಬರಬೇಕಾಗಿದ್ದು ಈ ಭಾರಿಯ ಮತದಾನ ಹೆಚ್ಚಳವಾಗುವ ನಿರೀಕ್ಷೆ
ಹೊಂದಲಾಗಿದೆ.
ಹಿರಿ ಜೀವಗಳಿಂದ ಮತದಾನ;
ಜಿಲ್ಲೆಯ ಯಲಬುರ್ಗಾದಲ್ಲಿ 92 ವರ್ಷದ ದೇವಮ್ಮ ಹಾಗೂ 85 ವರ್ಷದ ಶಾವಮ್ಮ,
ಯಲಬುರ್ಗಾ ತಾಲೂಕಿನ ರಾಜೂರು ಗ್ರಾಮದ 89 ವರ್ಷದ ಯಲ್ಲವ್ವ ಹಾಗೂ 86
ವರ್ಷದ ಲಕ್ಷ್ಮವ್ವ ತಳವಾರ ಎಂಬ ಹಿರಿ ಜೀವಗಳು ತಮ್ಮ ಕುಟುಂಬ ಸದಸ್ಯರ
ಸಹಾಯದೊಂದಿಗೆ ಮತಗಟ್ಟೆಗಳಿಗೆ ಅಗಮಿಸಿ ಮತದಾನ ಮಾಡಿ ಎಲ್ಲರಿಗೂ
ಮಾದರಿಯಾದರು. ಅದೇ ರೀತಿ ಜಿಲ್ಲೆಯ ಹಲವು ಕಡೆ ಹಿರಿಯ ನಾಗರೀಕರು ಸಹ
ಬಹಳ ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದು ಸಹ ಈ ಭಾರಿಯ
ವಿಶೇಷಗಳಲ್ಲೊಂದು. ವಯೋವೃದ್ದರಿಗೆ, ದಿವ್ಯಾಂಗರಿಗೆ ಪ್ರತಿ
ಮತಗಟ್ಟೆಯಲ್ಲಿ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿತ್ತು.
ಬಿಸಿಲನ್ನು ಲೆಕ್ಕಿಸದೇ ಸಾಲಲ್ಲಿ ನಿಂದ ಜನ;
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿದ್ದರೂ ಸಹ ಬಿಸಿಲನ್ನು ಲೆಕ್ಕಿಸದೇ ಸರತಿ
ಸಾಲಿನಲ್ಲಿ ನಿಂತು ಸಂವಿಧಾನ ಬದ್ಧವಾದ ಮತದಾನದ ಹಕ್ಕನ್ನು ಚಲಾಯಿಸಿದರು.
ವಿಕಲಚೇತನ ಮತದಾರರಿಗಾಗಿ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲಾ
ಮತಗಟ್ಟೆಗಳಲ್ಲಿ ವ್ಹಿಲ್‍ಚೇರ್‍ಗಳನ್ನು ಕಾಯ್ದಿರಿಸಲಾಗಿದ್ದು, ಅರ್ಹ ಮತದಾರರು
ಇದರ ಸಹಕಾರದೊಂದಿಗೆ ತಮ್ಮ ಹಕ್ಕನ್ನು ಚಲಾಯಿಸಿದರು.
ಮತಗಟ್ಟೆಗಳಲ್ಲಿ ಮತದಾರರಿಗೊಸ್ಕರ ಕುಡಿಯಲು ನೀರಿನ ವ್ಯವಸ್ಥೆಯನ್ನು
ಕಲ್ಪಿಸಲಾಗಿತ್ತು.
ಮತಗಟ್ಟೆ ವೀಕ್ಷಣೆ ವೇಳೆ ಕಂಡು ಬಂದದ್ದು ಕುಕನೂರಿನಲ್ಲಿ ಬೆಳಿಗ್ಗೆ 11
ಗಂಟೆ ಸುಮಾರಿಗೆ ಶೇ.10 ರಷ್ಟು ಮತದಾನವಾಗಿತ್ತು. ರಾಜೂರು
ಮತಗಟ್ಟೆಯಲ್ಲಿ ಬೆಳಿಗ್ಗೆ 11-20 ಗಂಟೆ ಸುಮಾರಿಗೆ ಶೇ.16 ರಷ್ಟು,
ಯಲಬುರ್ಗಾದಲ್ಲಿ ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಶೇ.18 ರಷ್ಟು ಮತದಾನ
ಆಗಿತ್ತು.
ಮತದಾನವು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು ಪ್ರತಿ ಎರಡು
ಗಂಟೆಗಳಿಗೊಮ್ಮೆ ದಾಖಲಾದ ಶೇಕಡಾವಾರು ಮತದಾನದ ವಿವರ ಸಂಜೆ 5
ಗಂಟೆಯವರೆಗೆ, ಅಂತಿಮ ವಿವರವನ್ನು ನಿರೀಕ್ಷಿಸಲಾಗಿದೆ;
ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಶೇ.07.51 ರಷ್ಟು
ಮತದಾನವಾಗಿತ್ತು. ಇದರಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.07.01,
ಮಸ್ಕೀ ಕ್ಷೇತ್ರದಲ್ಲಿ ಶೇ.06.92, ಕುಷ್ಟಗಿ ಕ್ಷೇತ್ರದಲ್ಲಿ ಶೇ.06.77, ಕನಕಗಿರಿ
ಕ್ಷೇತ್ರದಲ್ಲಿ ಶೇ.07.77, ಗಂಗಾವತಿ ಕ್ಷೇತ್ರದಲ್ಲಿ ಶೇ.06.63, ಯಲಬುರ್ಗಾ
ಕ್ಷೇತ್ರದಲ್ಲಿ ಶೇ.07.01, ಕೊಪ್ಪಳ ಕ್ಷೇತ್ರದಲ್ಲಿ ಶೇ.08.21 ಹಾಗೂ ಸಿರಗುಪ್ಪ
ಕ್ಷೇತ್ರದಲ್ಲಿ ಶೇ.09.12 ಸೇರಿ ಒಟ್ಟು ಶೇ.21.13 ರಷ್ಟು ಮತದಾನ ದಾಖಲಾಗಿತ್ತು.
ಬೆಳಿಗ್ಗೆ 11 ಗಂಟೆ ವೇಳೆಗೆ ಸಿಂಧನೂರು ಕ್ಷೇತ್ರದಲ್ಲಿ ಶೇ.22.13, ಮಸ್ಕೀ
ಕ್ಷೇತ್ರದಲ್ಲಿ ಶೇ.20.6, ಕುಷ್ಟಗಿ ಕ್ಷೇತ್ರದಲ್ಲಿ ಶೇ.19.36, ಕನಕಗಿರಿ ಕ್ಷೇತ್ರದಲ್ಲಿ
ಶೇ.22.98, ಗಂಗಾವತಿ ಕ್ಷೇತ್ರದಲ್ಲಿ ಶೇ.22.09, ಯಲಬುರ್ಗಾ ಕ್ಷೇತ್ರದಲ್ಲಿ
ಶೇ.16.29, ಕೊಪ್ಪಳ ಕ್ಷೇತ್ರದಲ್ಲಿ ಶೇ.21.64 ಹಾಗೂ ಸಿರಗುಪ್ಪ ಕ್ಷೇತ್ರದಲ್ಲಿ

Please follow and like us:
error