ಕೊಪ್ಪಳ ಜಿಲ್ಲೆಯಲ್ಲಿ ೨೩೨ ಪಾಜಿಟಿವ್, ಐವರ ಸಾವು

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಇಂದು ೨೩೨ ಪಾಜಿಟಿವ್ ಪ್ರಕರಣಗಳು ವರದಿಯಾಗಿದ್ದು. ಗಂಗಾವತಿ ತಾಲೂಕಿನಲ್ಲಿ ೧೦೬,ಕೊಪ್ಪಳ ೭೨, ಕುಷ್ಟಗಿ ೨೧, ಯಲಬುರ್ಗಾ೩೩ ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ೫೨೪೭ ಪ್ರಕರಣಗಳು ವರದಿಯಾದಂತಾಗಿವೆ. ಇಂದು ಐವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ ೧೧೯ಕ್ಕೆ ಏರಿಕೆಯಾಗಿದೆ. ಇಂದು ೧೧೪ ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ಧಾರೆ. ಒಟ್ಟು ೩೭೩೦ ಜನ ಡಿಸ್ಚಾರ್ಜ ಆಗಿದ್ಧಾರೆ. ೧೧೬೭ ಜನ ಹೋಮ್ ಐಸೋಲೇಷನಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ.

Please follow and like us:
error