fbpx

ಕೊಪ್ಪಳ ಜಿಲ್ಲೆಯಲ್ಲಿ ಇಂದು 33 ಕರೋನಾ ಪಾಜಿಟಿವ್ : 5 ಸಾವು

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಸಮುದಾಯದ ಮಟ್ಟದಲ್ಲಿ ಹರಡಿದೆ ಎನ್ನುವಂತಾಗಿದೆ. ದಿನೇ ದಿನೇ ಟೆಸ್ಟಿಂಗ್ ಪ್ರಮಾಣ ಹೆಚ್ಚು ಮಾಡಿದಂತೆಲ್ಲಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಒಟ್ಟು 33 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಬಂದಿರುವ ಪಾಜಿಟಿವ್ ಪ್ರಕರಣಗಳ ಸಂಖ್ಯೆ 673 ಆಗಿವೆ. ಅಲ್ಲದೇ ಇಂದು 34 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಲಾಗಿದೆ. ಒಂದು ಆಘಾತಕಾರಿ ಸುದ್ದಿಯೆಂದರೆ ಇವತ್ತು ಮೃತಪಟ್ಟವರ ಸಂಖ್ಯೆ 5. ಇದು  ಕೊಪ್ಪಳ ಜಿಲ್ಲೆಯಲ್ಲಿ ಒಂದು ದಿನದಲ್ಲಿ ಕರೋನಾ ಕಾರಣಕ್ಕೆ ಮೃತಪಟ್ಟವರ ಗರಿಷ್ಠ ಸಂಖ್ಯೆಯಾಗಿದೆ.  ಇದುವರೆಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18 ಆಗಿದೆ. ಇದು ಜನತೆಯಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಜನತೆ ದಯವಿಟ್ಟು ಸರಕಾರದ ಆದೇಶಗಳನ್ನು ಪಾಲಿಸಬೇಕು. ವಿನಾಕಾರಣ ಹೊರಗಡೆ ತಿರುಗಾಡಬಾರದು, ಸಾರ್ವಜನಿಕ ಅಂತರ ಕಾಪಾಡಿಕೊಳ್ಳಬೇಕು , ಸ್ಯಾನಿಟೈಜರ್, ಮಾಸ್ಕ ಬಳಸಬೇಕು ಹೀಗಾದಾಗ ಮಾತ್ರ ಇದನ್ನು ಕಂಟ್ರೋಲ್ ಮಾಡಬಹುದು. ಇನ್ನೂ 539 ಜನರ ಟೆಸ್ಟ್ ರಿಜಲ್ಟ್ ಬರುವುದು ಬಾಕಿ ಇದೆ.

Please follow and like us:
error
error: Content is protected !!