fbpx

ಕೊಪ್ಪಳ ಜಿಲ್ಲೆಯಲ್ಲಿ ಇಂದು 24 ಪಾಜಿಟಿವ್ ಪ್ರಕರಣಗಳು : ಒಬ್ಬರ ಸಾವು

Kannadanet NEWS ಕೊಪ್ಪಳ : ಕೊಪ್ಪಳದಲ್ಲಿಂದು 24 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ ಒಂದು ವಾರದಿಂದ ನಿರಂತರವಾಗಿ ಏರಿಕೆಯ ಗತಿಯಲ್ಲಿದ್ದ ಪಾಜಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇಂದು ಒಟ್ಟು 24 ಪ್ರಕರಣಗಳು ವರದಿಯಾಗುವುದರೊಂದಿಗೆ ಜಿಲ್ಲೆಯಲ್ಲಿ ಪಾಜಿಟಿವ್ ‍ಪ್ರಕರಣಗಳ ಸಂಖ್ಯೆ 356ಕ್ಕೇರಿದೆ.  ಇವತ್ತು ಕರೋನಾದಿಂದ ಒಬ್ಬರು ಸಾವನ್ನಪ್ಪಿದ್ದಾರೆ.  107 ಜನರನ್ನು ಇದುವರೆಗೆ ಡಿಸ್ಚಾರ್ಜ ಮಾಡಲಾಗಿದೆ.  ಇನ್ನೂ 1342 ಜನರ ಟೆಸ್ಟ ರಿಜಲ್ಟ್ ಬರುವುದು ಬಾಕಿ ಇದೆ. ಮೊನ್ನೆ ಪಾಜಿಟಿವ್ ಎಂದು ಮೆಸೆಜ್ ಬಂದಿದ್ದರಿಂದ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದ ನಗರಠಾಣೆಯ ಪೋಲಿಸ್ ಇಂದು ಮತ್ತೊಮ್ಮೆ  ಅಂಟಿಜೆನ್ ಟೆಸ್ಟ್ ಮಾಡಿ ನೆಗೆಟಿವ್ ಬಂದಿದ್ದರಿಂದ ಡಿಸ್ಚಾರ್ಜ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.   ವಿಕಾಸ್ ಕಿಶೋರ್ ತಿಳಿಸಿದ್ಧಾರೆ.

Please follow and like us:
error
error: Content is protected !!