ಕೊಪ್ಪಳ ಜಿಲ್ಲೆಯಲ್ಲಿ ಇಂದು 191 ಪಾಜಿಟಿವ್ , 2 ಸಾವು 204 ಡಿಸ್ಚಾರ್ಜ

ಕೊಪ್ಪಳ : ಸ್ವಾತಂತ್ರ್ಯ ದಿನಾಚರಣೆಯ ದಿನವೂ ಸಹ ಕರೋನಾ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ.  ಇಂದು ಜಿಲ್ಲೆಯಲ್ಲಿ 191 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಸಾವನ್ನಪ್ಪಿದ್ಧಾರೆ.

ಗಂಗಾವತಿ 111, ಕೊಪ್ಪಳ 44, ಕುಷ್ಟಗಿ 13,   ಯಲಬುರ್ಗಾ 23 ಒಟ್ಟು 191 ಪಾಜಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಈತನಕ ಒಟ್ಟು 3489 ಪಾಜಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ. ಇಬ್ಬರು ಇಂದು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.  ಇಂದು 204 ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಒಟ್ಟು ಡಿಸ್ಚಾರ್ಜ ಅದವರ ಸಂಖ್ಯೆ 2251 ಕ್ಕೆ ಏರಿದೆ. 703 ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಇನ್ನೂ 680 ಜನ ರಿಜಲ್ಟ್ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದ್ಧಾರೆ.

Please follow and like us:
error